ಫಿಫಾ ವಿಶ್ವಕಪ್ 2014

ಇರಾನ್‌ಗೆ ಬೇಕು ಅದೃಷ್ಟ

Published On :

ಸಲ್ವಾಡೋರ್: ಇರಾನ್ ತಂಡ ನಾಕೌಟ್ ಸುತ್ತಿಗೆ ಪ್ರವೇಶ ಪಡೆಯಬೇಕಾದರೆ, ಅದೃಷ್ಟ ಬೇಕು. ಬುಧವಾರ 'ಎಫ್‌' ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಎದುರಾಗಲಿರುವ ಬೋಸ್ನಿಯಾ ಆ್ಯಂಡ್ ಹರ್ಜ್‌ಗೋವಿನಾ
ವಿರುದ್ಧ ಇರಾನ್ ತಂಡ ಭಾರಿ ಅಂತರದ ಗೆಲವು ಕಾಣಬೇಕಿದೆ. ಅಷ್ಟೇ ಅಲ್ಲದೆ, ಮತ್ತೊಂದು ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ನೈಜೀರಿಯಾ ತಂಡ ಕೂಡ ದಯನೀಯ ಸೋಲು ಕಾಣಬೇಕಿದೆ. ಈ ಲೆಕ್ಕಾಚಾರದಂತೆ ನಡೆದಲ್ಲಿ ಇರಾನ್ ನಾಕೌಟ್ ಸುತ್ತು ಪ್ರವೇಶಿಸಬಲ್ಲದು.ಙ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ಸ್‌ನಲ್ಲಿ ಆಡುತ್ತಿರುವ ಬೋಸ್ನಿಯಾ ಆ್ಯಂಡ್ ಹರ್ಜ್‌ಗೋವಿನಾ ಉತ್ತಮ ಪ್ರತಿಭೆಗಳಿಂದ ಕೂಡಿದೆ. ಹಾಗಾಗಿ, ಇರಾನ್ ತಂಡ ಗೆಲವಿಗಾಗಿ ಕಠಿಣ ಹೋರಾಟ ನಡೆಸಬೇಕಿದೆ. ಇರಾನ್ ಮತ್ತು ಬೋಸ್ನಿಯಾ ಆ್ಯಂಡ್ ಹರ್ಜ್‌ಗೋವಿನಾ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದರೂ, ಸೌಹಾರ್ದಯುತ ಪಂದ್ಯಗಳಲ್ಲಿ ಈಗಾಗಲೇ ಪರಸ್ಪರ 5 ಬಾರಿ ಸೆಣಸಿವೆ. ಈ ಪೈಕಿ ಇರಾನ್ 4 ಪಂದ್ಯಗಳನ್ನು ಗೆದ್ದು ತನ್ನ ಪೂರ್ಣ ಪ್ರಾಬಲ್ಯ ಮೆರೆದಿದ್ದರೆ, ಬೋಸ್ನಿಯಾ ತಂಡ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದೇ ಅದಕ್ಕೆ ತೃಪ್ತಿದಾಯಕ ವಿಷಯ.


ಇರಾನ್-ಬೋಸ್ನಿಯಾ ಆ್ಯಂಡ್ ಹರ್ಜ್‌ಗೋವಿನಾ
('ಎಫ್‌' ಗುಂಪು)
ಪಂದ್ಯ ಆರಂಭ: ರಾತ್ರಿ 9.30
43    ರ್ಯಾಂಕ್    21
ಮುಖಾಮುಖಿ
5    ಪಂದ್ಯ    5
4    ಜಯ    0
1    ಡ್ರಾ    1
16    ಗೋಲು ಪರ    7

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.