ಫಿಫಾ ವಿಶ್ವಕಪ್ 2014

ಮಗ್ ಮೇಲೆ ಒಬಾಮಾ ವಿರಾಜಮಾನ

ಮಗ್ ಮೇಲೆ ಒಬಾಮಾ ವಿರಾಜಮಾನ
Published On :

ಜನಪ್ರೀಯ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಾಗಿ ಇಂಗ್ಲೆಂಡ್ ಆಟಗಾರರ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಮಗ್‌ಗಳಲ್ಲಿ ಒಂದು ಎಡವಟ್ಟಾಗಿದೆ. ಇಂಗ್ಲೆಂಡ್‌ನ ವಿಶ್ವಕಪ್ ಮಗ್ ಮೇಲೆ ಆ ತಂಡದ ರಕ್ಷಣಾ ವಿಭಾಗದ ಆಟಗಾರ ಕ್ರಿಸ್ ಸ್ಮಾಲ್ಲಿಂಗ್ ಚಿತ್ರದ ಬದಲಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಫೋಟೋ ಪ್ರಿಂಟ್ ಮಾಡಲಾಗಿದೆ. ಮಾಡಿರುವುದು ತಪ್ಪಾದರೂ, ಒಬಾಮಾ ಚಿತ್ರವಿರುವ ಮಗ್‌ಗಳಿಗೆ ಭಾರೀ ಬೇಡಿಕೆ ಬಂದಿದೆಯಂತೆ.
ಆದರೆ, ಮಗ್‌ಗಳನ್ನು ತಯಾರಿಸಿದ ಕಂಪನಿ ತಾನು ಮಾಡಿದ ತಪ್ಪಿನಿಂದ ಅರ್ಧ ಲೋಡ್‌ನಷ್ಟು ಮಗ್‌ಗಳನ್ನು ಕಡಿಮೆ ದರದಲ್ಲಿ ಇಡಿಯಾಗಿ ಮಾರಾಟ ಮಾಡಿದೆಯಂತೆ. ಆದರೆ, ಅವುಗಳಗೆ ಬೇಡಿಕೆ ಬಂದಿರುವುದಷ್ಟೇ ಅಲ್ಲ, ಅಮೆರಿಕಾದವರೇ 2000 ಮಗ್‌ಗಳನ್ನು ಖರೀದಿ ಮಾಡಿದ್ದಾರೆ ಎಂಬುದು ಮತ್ತೊಂದು ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.