ಕೋಸ್ಟ್ ಶೂಟ್ ಗ್ರೀಸ್ ರೋಸ್ಟ್

ರೆಸಿಫೆ: ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಸಿಕ್ಕ ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಪರಾಕ್ರಮ ಮೆರೆದ ಕೋಸ್ಟ ರಿಕಾ, ಫಿಫಾ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ಸೋಮವಾರ ನಸುಕಿನ ಸಮಯದಲ್ಲಿ ನಡೆದ ಪಂದ್ಯದಲ್ಲಿ ಕೋಸ್ಟ ರಿಕಾ ಹಾಗೂ ಗ್ರೀಸ್ ತಂಡಗಳು ನಿಗದಿತ ಸಮಯದಲ್ಲಿ 1-1 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದವು. ನಂತರ ಹೆಚ್ಚುವರಿ ಸಮಯಕ್ಕೆ ಜಾರಿದರೂ ಗೋಲು ಸಮಗೊಂಡ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಈ ಅವಕಾಶವನ್ನು ತನ್ನ ಎರಡೂ ಕೈಗಳಿಂದ ಬಾಚಿಕೊಂಡ ಕೋಸ್ಟ ರಿಕಾ 5-3 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಪೆನಾಲ್ಟಿ ಶೂಟೌಟ್ನಲ್ಲಿ ಕೋಸ್ಟ ರಿಕಾದ ಗೋಲ್ ಕೀಪರ್ ಕೇಲರ್ ನವಾಸ್ ತಡೆದ ಒಂದು ಗೋಲು ಪಂದ್ಯವನ್ನು ತಂಡದ ವಶಕ್ಕೆ ತಂದುಕೊಟ್ಟರು. ಅಲ್ಲದೆ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಈ ಗೆಲವಿನೊಂದಿಗೆ ಕೋಸ್ಟ ರಿಕಾ ಇದೇ ಮೊದಲ ಬಾರಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿದೆ.
ಪಂದ್ಯದುದ್ದಕ್ಕೂ ಕೋಸ್ಟ ರಿಕಾ ಹಾಗೂ ಗ್ರೀಸ್ ತಂಡಗಳು ಸಮಬಲದ ಹೋರಾಟ ನಡೆಸಿದವು. ಹಾಗಾಗಿ ಪಂದ್ಯದ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಎರಡನೇ ಅವಧಿಯಲ್ಲಿ 52ನೇ ನಿಮಿಷದಲ್ಲಿ ಕೋಸ್ಟ ರಿಕಾ ತಂಡದ ಬ್ರಿಯಾನ್ ರೂಜ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ತಂಡಕ್ಕೆ ಅತ್ಯಮೂಲ್ಯ ಮುನ್ನಡೆ ತಂದುಕೊಟ್ಟರು. ಸಹ ಆಟಗಾರನಿಂದ ಉತ್ತಮ ಪಾಸ್ ಪಡೆದ ಬ್ರಿಯಾನ್, ತನ್ನ ಚಾಣಾಕ್ಷತನದಿಂದ ಚೆಂಡಿಗೆ ಗೋಲಿನ ದಾರಿ ತೋರಿದರು. ನಂತರ ಗ್ರೀಸ್ ಗೋಲು ದಾಖಲಿಸಲು ಹಲವು ಪ್ರಯತ್ನ ಪಟ್ಟರೂ ಕೋಸ್ಟ ರಿಕಾ ತಡೆಯುವಲ್ಲಿ ಯಶಸ್ವಿಯಾಯಿತು.
66ನೇ ನಿಮಿಷದಲ್ಲಿ ಕೋಸ್ಟ ರಿಕಾದ ಆಸ್ಕರ್ ಡ್ಯುರ್ಟ್, ರೆಡ್ ಕಾರ್ಡ್ ಪಡೆಯುವ ಮೂಲಕ ಪಂದ್ಯದಿಂದ ಹೊರಗುಳಿದರು. ಇದರ ಪರಿಣಾಮ ಕೋಸ್ಟ ರಿಕಾ ಪಂದ್ಯದಲ್ಲಿ ಕೇವಲ 10 ಆಟಗಾರರನ್ನು ಮಾತ್ರ ಕಣಕ್ಕಿಳಿಸುವಂತಾಯಿತು.
ಪಂದ್ಯದ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಅಂದರೆ, 901ನೇ ನಿಮಿಷದಲ್ಲಿ ಗ್ರೀಸ್ ಪರ ಗೋಲು ದಾಖಲಿಸಿದ ಲ್ಯಾಜರೋಸ್ ಕ್ರಿಸ್ಟೊಡೊಲೊಪೊಲೊಸ್ ತಂಡಕ್ಕೆ ಮರು ಜೀವ ನೀಡಿದರು. ನಂತರ ಉಭಯ ತಂಡಗಳು ಸಮಬಲ ಸಾಧಿಸಿದ ಹಿನ್ನಲೆಯಲ್ಲಿ ಪಂದ್ಯ ಪೆನಾಲ್ಟಿ ಶೂಟೌಟ್ಗೆ ಜಾರಿತು.
ಈ ವೇಳೆ ತಪ್ಪು ಹೆಜ್ಜೆ ಇಡದೇ, ಎದುರಾಳಿ ಗೋಲ್ಕೀಪರ್ ಅನ್ನು 5 ಬಾರಿಯೂ ವಂಚಿಸುವಲ್ಲಿ ಯಶಸ್ವಿಯಾದ ಕೋಸ್ಟ ರಿಕಾ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ಅಲ್ಲದೆ ಗ್ರೀಸ್ ತಂಡವನ್ನು ಕೇವಲ 3 ಗೋಲುಗಳಿಗೆ ನಿಯಂತ್ರಿಸಿದ ಕೋಸ್ಟ ರಿಕಾ ಐತಿಹಾಸಿಕ ಗೆಲವು ದಾಖಲಿಸಿತು.
ಪೆನಾಲ್ಟಿ ಶೂಟೌಟ್
ಕೋಸ್ಟರಿಕಾ
ಸೆಲ್ಸೊ ಬರ್ಜಸ್ ಗೋಲು
ಬ್ರಿಯಾನ್ ರೂಜ್ ಗೋಲು
ಗಿಯಾಂಕಾರ್ಲೊ ಗೊಂಜಲೆಜ್ ಗೋಲು
ಜೋಲ್ ಕ್ಯಾಂಬೆಲ್ ಗೋಲು
ಮೈಕಲ್ ಉಮಾನ ಗೋಲು
ಗ್ರೀಸ್
ಕಾನ್ಸ್ಟಾಂಟಿನೊಸ್ ಮಿಟ್ರೊಗ್ಲೌ ಗೋಲು
ಲ್ಯಾಜರೋಸ್ ಕ್ರಿಸ್ಟೊಡೊಲೊಪೊಲೊಸ್ ಗೋಲು
ಜೋಸ್ ಹೋಲೆಬಸ್ ಗೋಲು
ತಿಯೊಫಾನಿಸ್ ಗೆಕಾಸ್ ವಿಫಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


