ಕೊಂಚ ಹಾಲಿನಲ್ಲಿ ಕಾನ್ ಫ್ಲೋರ್ ಕದಡಿ, ಉಳಿದ ಹಾಲನ್ನು ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ.
ಡ್ರಿಂಕಿಂಗ್ ಚಾಕೋಲೇಟ್, ಇನ್ ಸ್ಟಂಟ್ ಕಾಫಿ, ಸಕ್ಕರೆ ಹಾಕಿ ಎರಡು ನಿಮಿಷ ಕುದಿಸಿ ಕೆಳಗಿಳಿಸಿ.
ಆರಿದ ಮೇಲೆ ಚೆನ್ನಾಗಿ ಕಡೆದ ಹಾಲಿನ ಕೆನೆಯನ್ನು ಸೇರಿಸಿ ಮಿಕ್ಸರ್ ನಲ್ಲಿ ಐದು ನಿಮಿಷ ತಿರುಗಿಸಿ.
ಆಮೇಲೆ ಗೋಡಂಬಿ, ವಾಲ್ ನಟ್, ಬಾದಾಮಿ, ದ್ರಾಕ್ಷಿ ಸೇರಿಸಿ ಮೂರು ಘಂಟೆ ಫ್ರೀಝರ್ ನಲ್ಲಿಟ್ಟು ತೆಗೆಯಬೇಕು. ಈ ಐಸ್ ಕ್ರೀಮ್ ಗೆ ಚಾಕ್ ಲೆಟ್ ಚಿಪ್ಸ್ ಸೇರಿಸಿದರೆ ತುಂಬಾ ರುಚಿಯಾಗಿರುತ್ತೆ.