ಮೊದಲು ಈರುಳ್ಳಿ ಮತ್ತು ಟೊಮೆಟೊವನ್ನು ತೊಳೆದು ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ.
ಎಣ್ಣೆ ಕಾದ ನಂತರ ಹೆಚ್ಚಿರುವ ಈರುಳ್ಳಿ ಹಾಗೂ ಟೊಮೆಟೊ, ಕೊತ್ತಂಬರಿ ಸೊಪ್ಪು, ಉಪ್ಪು, ಹಸಿಮೆಣಸಿಕಾಯಿ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
ನಂತರ ಒಂದು ಪಾತ್ರೆಗೆ ಹಾಕಿಡಿ. ಇದನ್ನು ಕುದಿಸುವ ಅಗತ್ಯವಿಲ್ಲ. ಇದನ್ನು ಗ್ರೇವಿ ಎಂದು ಕರೆಯುತ್ತೇವೆ.
ಮಿಕ್ಕ ತರಕಾರಿಗಳನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಿಕೊಂಡು ಬೇಯಿಸಿ. ನಂತರ ರವೆ ಮತ್ತು ಮೈದಾವನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಅದಕ್ಕೆ ಗರಂಮಸಾಲ, ಬೇಯಿಸಿದ ತರಕಾರಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ನಂತರ ಉಂಡೆಗಳನ್ನು ಹಾಕಿ ಕರಿಯಿರಿ. ಕರಿದ ಉಂಡೆಗಳನ್ನು ಮಾಡಿಟ್ಟುಕೊಂಡಿರುವ ಗ್ರೇವಿಯಲ್ಲಿ ಹಾಕಿ. ತುಂಬಾ ಹೊತ್ತು ನೆನೆಸಬೇಡಿ.
ಗರಿ ಗರಿ ಇರುವಾಗಲೇ ತಿಂದು ನೋಡಿ. ಇದನ್ನು ಚಪಾತಿಯ ಜೊತೆ ತಿಂದರೆ ತುಂಬಾ ರುಚಿಕರ.