ನಂತರ ಕತ್ತರಿಸಿದ ಹಣ್ಣುಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಏಲಕ್ಕೆ ಪುಡಿ ಸೇರಿಸಿ ಮತ್ತೆ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಅದನ್ನು ಕೆಳಗಿಳಿಸಿ.
ಬಿಸಿ ಹಾಲನ್ನು ತಣ್ಣಗಾಗಿಸಿಕೊಂಡು ಆ ಹಾಲಿಗೆ ಈ ಮೊದಲೇ ತಯಾರಿಸಿಟ್ಟುಕೊಂಡ ಮಿಶ್ರ ಹಣ್ಣುಗಳ ಪೇಸ್ಟ್ ನ್ನು ಸಿಹಿಗೆ ತಕ್ಕಷ್ಟು ಜೇನುತುಪ್ಪ ಮತ್ತು ಸಣ್ಣದಾಗಿ ಕತ್ತರಿಸಿದ ದ್ರಾಕ್ಷಿ, ಗೋಡಂಬಿ, ಕೇಸರಿ ದಳ, ಬಾದಾಮಿಯ ಚೂರುಗಳನ್ನು ಸೇರಿಸಿ.
ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್ ನಲ್ಲಿರಿಸಿ 5 ರಿಂದ 6 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟರೆ ಬಾಯಿ ನೀರೂರಿಸುವ ಕುಲ್ಫಿ ಸವಿಯಲು ಸಿದ್ಧ.