ಪಾಪ್ ಕಾರ್ನ್ ಚಿಕನ್

ಪಾಪ್ ಕಾರ್ನ್ ಚಿಕನ್ ಮಾಡುವ ವಿಧಾನ
ಪಾಪ್ ಕಾರ್ನ್ ಚಿಕನ್
ಪಾಪ್ ಕಾರ್ನ್ ಚಿಕನ್

ಪಾಪ್ ಕಾರ್ನ್ ಚಿಕನ್ ಗೆ ಬೇಕಾಗುವ ಪದಾರ್ಥಗಳು

  • ಬೋನ್ ಲೆಸ್ ಚಿಕನ್ -500 ಗ್ರಾಂ
  • ಕೆಂಪು ಮೆಣಸಿನಕಾಯಿ ಪುಡಿ- 2 ಟೀ ಸ್ಪೂನ್
  • ಮೆಣಸಿನ ಪುಡಿ- 1 ಟೀ ಸ್ಪೂನ್
  • ಉಪ್ಪು-ರುಚಿಗೆ ತಕ್ಕಷ್ಟು
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಅರಿಶಿನ ಪುಡಿ.
  • ಬ್ರೆಡ್ ಪುಡಿ-2 ಚಮಚ
  • ಮೊಟ್ಟೆ-1
  • ಗರಂ ಮಸಾಲಾ - 1 ಸ್ಪೂನ್
  • ಕಾರ್ನ್ ಪ್ಲೋರ್ ಅರ್ಧ ಕಪ್
  • ಕರಿಯಲು ಅಡುಗೆ ಎಣ್ಣೆ

 ಮಾಡುವ ವಿಧಾನ

  • ಮೊದಲಿಗೆ ಬೋನ್ ಲೆಸ್ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಂಡು ನೀರನ್ನು ಬಸಿದುಕೊಳ್ಳಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ.
  • ಅದಕ್ಕೆ ಉಪ್ಪು, ಮೆಣಸಿನಕಾಯಿ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬ್ರೆಡ್ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ಮಿಕ್ಸ್ ಮಾಡಿದ ನಂತರ 1ಅರ್ಧ ಗಂಟೆ ನೆನೆಯಲು ಬಿಡಿ. ಸ್ಟವ್ ಹಚ್ಚಿ ಎಣ್ಣೆ ಕಾಯಲು ಬಿಡಿ.
  • ನೆನೆದ ಚಿಕನ್ ಮಿಕ್ಸ್ ಅನ್ನು ಮೊದಲಿಗೆ ಮೊಟ್ಟೆಯ ಬಿಳಿಯ ಭಾಗದಲ್ಲಿ ಅದ್ದಿ ನಂತರ ಅದನ್ನು ಕಾರ್ನ್ ಫ್ಲೋರ್ ಗೆ ಅದ್ದಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೂ ಕರಿಯರಿ. ಟಮೊಟೊ ಸಾಸ್ ಜೊತೆ ಬಿಸಿಬಿಸಿಯಾದ ಪಾಪ್ ಕಾರ್ನ್ ಚಿಕನ್ ಸವಿಯಲು ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com