ಸ್ವಲ್ಪ ರವೆ ಇದ್ದರೆ ಸಾಕು, ರುಚಿಕರವಾದ ಸಂಡಿ ಸಿದ್ಧ; ಈ ವಿಧಾನ ಒಮ್ಮೆ ಪ್ರಯತ್ನಿಸಿ..!
ರವೆ ಸಂಡಿಗೆ ಬೇಸಿಗೆಯಲ್ಲಿ ತಯಾರಿಸಿ ಒಣಗಿಸಿಟ್ಟುಕೊಂಡು, ಬೇಕಾದಾಗ ಎಣ್ಣೆಯಲ್ಲಿ ಕರಿದು ಸವಿಯಬಹುದಾದ ರುಚಿಕರವಾದ ತಿಂಡಿ. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳೊಂದಿಗೆ ಇದನ್ನು ತಯಾರಿಸಬಹುದು.

ರವೆ ಸಂಡಿಗೆ ಬೇಸಿಗೆಯಲ್ಲಿ ತಯಾರಿಸಿ ಒಣಗಿಸಿಟ್ಟುಕೊಂಡು, ಬೇಕಾದಾಗ ಎಣ್ಣೆಯಲ್ಲಿ ಕರಿದು ಸವಿಯಬಹುದಾದ ರುಚಿಕರವಾದ ತಿಂಡಿ. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳೊಂದಿಗೆ ಇದನ್ನು ತಯಾರಿಸಬಹುದು. ಸಂಜೆಯ ಚಹಾದೊಂದಿಗೆ ಸವಿಯಲು ಇದು ಚೆನ್ನಾಗಿರುತ್ತದೆ.
ಬೇಕಾಗುವ ಪದಾರ್ಥಗಳು...
ರವೆ- 1 ಸಣ್ಣ ಬಟ್ಟಲು
ಹಸಿಮೆಣಸಿನಕಾಯಿ- 2
ಜೀರಿಗೆ- 1 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಇಂಗು- 1 ಚಿಟಿಕೆ
ಕರಿಬೇವಿನ ಸೊಪ್ಪು- ಸ್ವಲ್ಪ
ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು (ಕರಿಯಲು)
ಮಾಡುವ ವಿಧಾನ...
ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಇಡಿ.
ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಇಂಗು ಮತ್ತು ಉಪ್ಪು ಸೇರಿಸಿ.
ಈಗ ಸಣ್ಣ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನಿರಂತರವಾಗಿ ಕೈಯಾಡಿಸಿ. ಗಂಟುಗಳಾಗದಂತೆ ನೋಡಿಕೊಳ್ಳಿ.
ರವೆ ಚೆನ್ನಾಗಿ ಬೆಂದು ಮಿಶ್ರಣ ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಸ್ವಚ್ಛವಾದ ಕಾಟನ್ ಬಟ್ಟೆಯ ಮೇಲೆ ಸಣ್ಣ ಸಣ್ಣ ಉಂಡೆಗಳಂತೆ ಅಥವಾ ತೆಳುವಾಗಿ ಹರಡಿ.
ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಸಂಪೂರ್ಣ ಒಣಗಲು ಸಾಮಾನ್ಯವಾಗಿ ಒಂದರಿಂದ ಎರಡು ದಿನ ಬೇಕಾಗಬಹುದು. ಹವಾಮಾನಕ್ಕೆ ಅನುಗುಣವಾಗಿ ಸಮಯ ಬದಲಾಗುತ್ತದೆ.
ಸಂಪೂರ್ಣ ಒಣಗಿದ ಸಂಡಿಗೆಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಿ.
ಟಿಪ್ಸ್...
ರವೆ ಮಿಶ್ರಣವನ್ನು ಚೆನ್ನಾಗಿ ಬೇಯಿಸುವುದು ಮುಖ್ಯ. ಇಲ್ಲದಿದ್ದರೆ ಸಂಡಿಗೆಗಳು ಸರಿಯಾಗಿ ಗಟ್ಟಿಯಾಗುವುದಿಲ್ಲ.
ಸಂಡಿಗೆಗಳನ್ನು ಸಂಪೂರ್ಣ ಒಣಗಿಸಿದ ನಂತರವೇ ಡಬ್ಬದಲ್ಲಿ ಹಾಕಿ.
ತೇವಾಂಶ ಉಳಿದರೆ ಸಂಡಿಗಳಿಗೆ ಶಿಲೀಂಧ್ರ ಬರಬಹುದು.
ಕರಿಯುವಾಗ ಎಣ್ಣೆ ಸರಿಯಾದಷ್ಟು ಬಿಸಿಯಾಗಿರಲಿ. ಆಗ ಸಂಡಿಗಳು ಚೆನ್ನಾಗಿ ಉಬ್ಬಿ ಗರಿಗರಿಯಾಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



