ಅವರೆಕಾಳು ಸಾರು

ಅವರೆಕಾಳು ಸಾರು
ಅವರೆಕಾಳು ಸಾರು
Updated on: 

ಸಾಮಗ್ರಿಗಳು
1. ಅವರೆಕಾಳು- 1 ಪಾವು
2. ಸಾರಿನ ಪುಡಿ- 1 ಟೀ ಚಮಚ
3. ಹುಣಸೆರಸ- 2 ಟೀ ಚಮಚ
4. ಉಪ್ಪು, ಇಂಗು- ರುಚಿಗೆ ತಕ್ಕಷ್ಟು
5. ಎಣ್ಣೆ- 1 ಟೀ ಚಮಚ
6. ಸಾಸಿವೆ- 1 ಟೀ ಚಮಚ
7. ಕರಿಬೇವು, ಕೊತ್ತಂಬರಿ ಸೊಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  •     ಅವರೆಕಾಳು ಎಳೆಯದಾಗಿ, ಫ್ರೆಶ್ ಆಗಿರಬೇಕು.
  •     ಅವರೆಕಾಳಿಗೆ ಎಷ್ಟು ಸಾರು ಬೇಕೋ ಅಷ್ಟು ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿ.
  •     ನಂತರ ಸೊಪ್ಪು, ಸಾರಿನ ಪುಡಿ, ಹುಣಸೆರಸ, ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ ಕುದಿಸಿ.
  •     ಎಣ್ಣೆ ಕಾಯಿಸಿ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಕೊಡಿ.

- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com