ಮಾಡುವ ವಿಧಾನ: ಸ್ಟವ್ ಹಚ್ಚಿ ದಪ್ಪ ತಳ ಇರುವ ಪಾತ್ರೆಯಲ್ಲಿ ತುಪ್ಪ ಕಾಯಲು ಬಿಡಿ. ತುಪ್ಪ ಕರಗಿದ ಮೇಲೆ ಅದಕ್ಕೆ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೈ ಬಿಡದ ಹಾಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಬೇಕು. ಸುಮಾರು 15ರಿಂದ 20 ನಿಮಿಷದವರೆಗೆ ಕೈ ಆಡಿಸುತ್ತಿರಬೇಕು. ಕಡಲೆಹಿಟ್ಟು ಮತ್ತು ತುಪ್ಪ ಚೆನ್ನಾಗಿ ಮಿಕ್ಸ್ ಆಗಿ ಪಾಕದ ರೀತಿ ಬರುವವರೆಗೂ ಕಲೆಸುತ್ತಿರಬೇಕು.ನಂತರ ತಣ್ಣಗಾಗಲು ಬಿಡಿ.
ಪಾಕ ಉಗುರು ಬೆಚ್ಚಗೆ ಇರುವಾಗ ಅದಕ್ಕೆ ಪುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಅದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಏಲಕ್ಕಿ ಹಾಕಿ ಕಲೆಸಿ. ತದನಂತರ ಕೈಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಮಾಡಿ. ಈಗ ಸಿಹಿಯಾದ ಬೇಸನ್ ಲಾಡು ಸವಿಯಲು ಸಿದ್ಧ.