ಕಡಲೇಬೀಜದ ಚಿಕ್ಕಿ
Updated on:
- ಕಡಲೆಬೀಜ ಒಂದು ಕಪ್
- ಬೆಲ್ಲ 1 ಕಪ್ (ಪುಡಿ ಮಾಡಿದ್ದು)
- ಏಲಕ್ಕಿ- 4
- ಮೊದಲಿಗೆ ಕಡಲೆ ಬೀಜ ಹುರಿದು ಪುಡಿ ಮಾಡಿಟ್ಟುಕೊಳ್ಳಿ.
- ಆಮೇಲೆ ಸ್ಟವ್ ಹಚ್ಚಿ ಅದರ ಮೇಲೆ ದಪ್ಪ ತಳ ಇರುವ ಪಾತ್ರೆ ಇಡಿ
- ಪಾತ್ರೆಗೆ ಬೆಲ್ಲ ಹಾಕಿ 2 ಚಮಚ ನೀರು ಸೇರಿಸಿ
- ಬೆಲ್ಲ ಕರಗಿ ಎಳೆ ಪಾಕ ಬಂದ ಕೂಡಲೇ ಅದಕ್ಕೆ ಪುಡಿ ಮಾಡಿದ ಕಡಲೆ ಬೀಜ ಸೇರಿಸಿ
- ನಂತರ ಅದಕ್ಕೆ ಏಲಕ್ಕಿ ಪುಡಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ
- ಆಮೇಲೆ ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ಮಿಕ್ಸ್ ಹಾಕಿ
- ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಚಿಕ್ಕಿಯನ್ನು ಕತ್ತರಿಸಿ
- ಮನೆಯಲ್ಲೇ ತಯಾರಿಸಿದ ಶುಚಿರುಚಿಯಾದ ಕಡಲೆಬೀಜದ ಚಿಕ್ಕಿ ತಿನ್ನಲು ಸಿದ್ದ
Kannada Prabha
www.kannadaprabha.com