ಜೋಳ ಮತ್ತು ತರಕಾರಿ ರಾಯತ

ಜೋಳ ಮತ್ತು ತರಕಾರಿ ರಾಯತ ಮಾಡುವ ವಿಧಾನ...
ಜೋಳ ಮತ್ತು ತರಕಾರಿ ರಾಯತ
ಜೋಳ ಮತ್ತು ತರಕಾರಿ ರಾಯತ
Updated on: 

ಬೇಕಾಗುವ ಪದಾರ್ಥಗಳು

  • ಹೂಕೋಸು - ಸಣ್ಣ ಗಾತ್ರದ್ದು
  • ಹಸಿ ಬಟಾಣಿ - ಅರ್ಧ ಬಟ್ಟಲು
  • ಆಲೂಗಡ್ಡೆ - ಎರಡು
  • ಈರುಳ್ಳಿ - ಎರಡು (ಬೇಕಿದ್ದರೆ)
  • ಜೋಳ - ಮೂರು
  • ಕ್ಯಾರಟ್- ಎರಡು
  • ಫ್ರೆಂಚ್ ಬೀನ್ಸ್- ಅರ್ದ ಬಟ್ಟಲು
  • ಮೊಸರು - ಎರಡು ಬಟ್ಟಲು
  • ಸಕ್ಕರೆ ಮತ್ತು ಉಪ್ಪು - ರುಚಿಗೆ ತಕ್ಕಷ್ಟು
  • ಹಸಿ ಮೆಣಸಿನಕಾಯಿ - ನಾಲ್ಕು
  • ಸಾಸಿವೆ- ಸ್ವಲ್ಪ
  • ಕರಿಬೇವ- ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಅಡುಗೆ ಎಣ್ಣೆ - ಸ್ವಲ್ಪ
ಮಾಡುವ ವಿಧಾನ...
  • ಮೊದಲಿಗೆ ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಂಡು, ಬಟಾಣಿ, ಬಿಡಿಸಿ ಜೋಳದ ಕಾಳುಗಳ ಸಮೇತ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಕುಕ್ಕರು ನಾಲ್ಕು ವಿಷಲ್ ಹಾಕಿದರೂ ಸಾಕು. ನಂತರ ನೀರನ್ನು ಬಸಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.
  • ಒಂದು ಅಗಲ ತಳದ ಪಾತ್ರೆಯಲ್ಲಿ ನಾಲ್ಕಾರು ಚಮಚದಷ್ಟು ಎಣ್ಣೆ ಹಾಕಿ, ಸ್ಟೌ ಉರಿಯನ್ನು ಸಿಮ್ ನಲ್ಲಿಡಿ. ಬಿಸಿಯಾದ ನಂತರ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ತಾಳಿಸಿ.
  • ಒಗ್ಗರಣೆ ಪಾತ್ರೆಗೆ ಮೊಸರನ್ನು ಕಡಗೋಲಿನಿಂದ ಕಡಿದು ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಸಕ್ಕರೆ ಹಾಕಿ ಕೈಯಾಡಿಸಿ.
  • ಇಷ್ಟಾದ ಮೇಲೆ ಬೇಯಿಸಿಟ್ಟುಕೊಂಡ ತರಕಾರಿಗಳನ್ನು ಪಾತ್ರೆಗೆ ಸುರಿದು ಐದರಿಂದ ಆರು ನಿಮಿಷ ಬೇಯಲು ಬಿಡಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ತೊಳೆದು ಸಣ್ಣಗೆ ಕತ್ತರಿಸಿ ಹಾಕಿ ಕೈಯಾಡಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com