ಸೋಯಾ ಬೀನ್ ಅನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಹಾಕಬೇಕು.
ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.
ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ರುಬ್ಬಿಕೊಳ್ಳಬೇಕು. ನಂತರ ಇದನ್ನು ಸೋಯಾ ಬೀನ್ ಗೆ ಹಾಕಿ. ನಂತರ ಖಾರದ ಪುಡಿ, ಗರಂ ಮಸಾಲ, ಮೊಸರು ಹಾಗೂ ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
ಇದಾನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ನಂತರ ಇದಕ್ಕೆ ಮಸಾಲೆ ಮಿಶ್ರಿತ ಸೋಯಾಬೀನ್ ಅನ್ನು ಹಾಕಿ 10 ನಿಮಿಷ ಫ್ರೈ ಮಾಡಿದರೆ ರುಚಿಕರವಾದ ಸೋಯಾಬೀನ್ ಕಬಾಬ್ ಸಿದ್ಧವಾಗುತ್ತದೆ.