ಕಡಲೆಕಾಳು ಕರಿ ತಯಾರಿಸಲು ಹಿಂದಿನ ದಿನದ ರಾತ್ರಿಯೇ ಕಾಬೂಲ್ ಕಡಲೆಕಾಳುಗಳನ್ನು ನೆನೆ ಹಾಕಿಕೊಳ್ಳಬೇಕು.
ನಂತರ ಕುಕ್ಕರಿನಲ್ಲಿ ನೆನೆಸಿದ ಕಾಬೂಲ್ ಕಡಲೆಕಾಳುಗಳನ್ನು ಬೇಯಿಸಿಕೊಳ್ಳಬೇಕು.
ಒಂದು ಬಾಣಲೆಗೆ ಜೋಳದ ಹಿಟ್ಟು, ಉಪ್ಪು, ಖಾರದ ಪುಡಿ, ಬೆಂದ ಕಡಲೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಗಟ್ಟಿಯಾಗಿ ಮಿಶ್ರಣ ಮಾಡಬೇಕು.
ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಹಿಟ್ಟಿನಲ್ಲಿ ಕಲಸಿಟ್ಟ ಕಡಲೆಕಾಳುಗಳನ್ನು ಕರಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು.
ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ಹುರಿದುಕೊಳ್ಳಬೇಕು. ಈರುಳ್ಳಿ ಚಿನ್ನದ ಬಣ್ಣ ಬಂದ ನಂತರ ಟೊಮೆಟೊ ಪ್ಯೂರಿ ಸೇರಿಸಿ ಮತ್ತೆ 3 ನಿಮಿಷ ಹುರಿಯಬೇಕು. ಇದಕ್ಕೆ ಖಾರದ ಪುಡಿ, ಗರಂ ಮಸಾಲಾ, ಉಪ್ಪು, ಮಾವಿನಕಾಯಿ ಪುಡಿ ಹಾಕಿ ಕುದಿಸಬೇಕು.