ನೀರು ಮಾವಿನಕಾಯಿ ಮಜ್ಜಿಗೆ ಹುಳಿ

ನೀರು ಮಾವಿನಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ...
ನೀರು ಮಾವಿನಕಾಯಿ ಮಜ್ಜಿಗೆ ಹುಳಿ
ನೀರು ಮಾವಿನಕಾಯಿ ಮಜ್ಜಿಗೆ ಹುಳಿ
Updated on: 

ಮಾವಿನಕಾಯಿಯನ್ನು ಮಳೆಗಾಲಕ್ಕೆ ಶೇಖರಿಸಿಡುವ ಸಂಪ್ರದಾಯ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿವೆ. ಉಪ್ಪು ನೀರು ತಯಾರಿಸಿ ಅದರಲ್ಲಿ ಮಾವಿನಕಾಯಿ ಹಾಕಿ ಒಂದು ವರ್ಷದವರೆಗೆ ಕೆಡದಂತೆ ಇಡಬಹುದು. ಈ ಮಾವಿನಕಾಯಿಯಿಂದ ಸಾರು, ಪಲ್ಯ, ಗೊಜ್ಜು, ತಂಬುಳಿ, ಸಾಂಬಾರು, ಮಜ್ಜಿಗೆಹುಳಿ ಇತ್ಯಾದಿ ಖಾದ್ಯಗಳನ್ನು ಮಾಡಬಹುದು.

ಬೇಕಾಗುವ ಪದಾರ್ಥಗಳು

  • ನೀರು ಮಾವಿನಕಾಯಿ
  • 1.5 ಕಪ್ ಕಾಯಿತುರಿ
  • 1 ಹಸಿಮೆಣಸು
  • ರುಚಿಗೆ ತಕ್ಕಷ್ಟು ಉಪ್ಪು
  • 1.5 ಚಮಚ ಸಾಸಿವೆ
  • 1/4 ಚಮಚ ಜೀರಿಗೆ
  • 1-2 ಮೆಣಸಿನಕಾಯಿ
  • 4-5 ಕರಿಬೇವು ಎಲೆ
  • 1 ಚಮಚ ಎಣ್ಣೆ
ಮಾಡುವ ವಿಧಾನ....
  • ಉಪ್ಪು ನೀರಿನಿಂದ ಮಾವಿನಕಾಯಿ ತೆಗೆದು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಅದನ್ನು ಸಣ್ಣಗೆ ಹೆಚ್ಚಿಕೊಂಡು ಒಲೆಯಲ್ಲಿ ಬೇಯಿಸಿ.
  • ಕಾಯಿತುರಿ, ಹಸಿಮೆಣಸು, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.  ಅದನ್ನು ಪಾತ್ರೆಗೆ ಹಾಕಿ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಮಜ್ಜಿಗೆ ಸೇರಿಸಿ. 
  • ಕರಿಬೇವು, ಸಾಸಿವೆ, ಒಣಮೆಣಸು ಒಗ್ಗರಣೆ ಕೊಡಿ. ಅನ್ನ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com