ಮಾವಿನಹಣ್ಣಿನ ರಸಾಯನ

ಮಾವಿನಹಣ್ಣಿನ ರಸಾಯನ ಮಾಡುವ ವಿಧಾನ...
ಮಾವಿನಹಣ್ಣಿನ ರಸಾಯನ
ಮಾವಿನಹಣ್ಣಿನ ರಸಾಯನ
Updated on: 

ಬೇಕಾಗುವ ಪದಾರ್ಥಗಳು

  • ಮಾವಿನಹಣ್ಣು-2ರಿಂದ 3
  • ತೆಂಗಿನಕಾಯಿ ತುರಿ 2 ಕಪ್
  • ಬೆಲ್ಲ ಒಂದು ಅಚ್ಚು
  • ಸಕ್ಕರೆ ಅರ್ಧ ಕಪ್
  • ಏಲಕ್ಕಿ
ಮಾಡುವ ವಿಧಾನ....
  • ಮಾವಿನಹಣ್ಣನ್ನು ಸಿಪ್ಪೆ ತೆಗೆದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಉಪ್ಪು, ಬೆಲ್ಲ, ಸಕ್ಕರೆ ಏಲಕ್ಕಿಪುಡಿ ಬೆರೆಸಿಡಿ.
  • ತೆಂಗಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ. ಒಂದು ತಳ ಇರುವ ಪಾತ್ರೆ ಮೇಲೆ ಬಟ್ಟೆ ಇಟ್ಟು ಅದಕ್ಕೆ ರುಬ್ಬಿಕೊಂಡ ತೆಂಗಿನಕಾಯಿಯನ್ನು ಹಾಕಿ ಚೆನ್ನಾಗಿ ಹಿಂಡಿ. ಆಗ ತೆಂಗಿನಕಾಯಿ ಹಾಲು ಪಾತ್ರೆಗೆ ಇಳಿಯುತ್ತದೆ.
  • ಈ ಹಾಲನ್ನು ಮಾವಿನಹಣ್ಣಿಗೆ ಹಾಕಿ ಚೆನ್ನಾಗಿ ಕಲಸಿ. ರಸಾಯನ ಸಿದ್ದ. ಇದಕ್ಕೆ ಬೇಕೆಂದರೆ ಕಪ್ಪು ಎಳ್ಳು  ಸಿಡಿಸಿ ಹಾಕಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com