ಉದ್ದಿನಬೇಳೆ ಕೂಟು

ಉದ್ದಿನಬೇಳೆ ಕೂಟು
ಉದ್ದಿನಬೇಳೆ ಕೂಟು
Updated on: 

ಸಾಮಗ್ರಿಗಳು
1. ಉದ್ದಿನಬೇಳೆ-2 ಟೀ ಚಮಚ
2. ತೆಂಗಿನಕಾಯಿ- 1 ಬಟ್ಟಲು
3. ಅಕ್ಕಿ- 1 ಟೀ ಚಮಚ
4. ಮೆಣಸು- 8
5. ಎಣ್ಣೆ- 1 ಟೀ ಚಮಚ
6. ಸಾಸಿವೆ- 1 ಟೀ ಚಮಚ
7. ಉಪ್ಪು- 1 1/2  ಟೀ ಚಮಚ

ಮಾಡುವ ವಿಧಾನ
ಬಳಸಬಹುದಾದ ತರಕಾರಿ: ಯಾವುದಾದರೊಂದು- ಪಡವಲಕಾಯಿ, ದಂಟಿನಸೊಪ್ಪು, ಬಾಳೆಕಾಯಿ, ಹೀರೆಕಾಯಿ. ಉದ್ದಿನಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೂ ಹುರಿಯಿರಿ. ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಸಿ ಮೆಣಸನ್ನು ತುಪ್ಪದಲ್ಲಿ ಪಟಪಟ ಹುರಿಯಿರಿ. ಅಕ್ಕಿ, ತೆಂಗಿನತುರಿ, ಮೆಣಸು, ಉದ್ದಿನಬೇಳೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಇದಕ್ಕೆ ಬೇಕಾಗುವಷ್ಟು ಉಪ್ಪು ಹಾಕಿ ರುಬ್ಬಿ. 1 ಟೀ ಚಮಚ ಎಣ್ಣೆ ಕಾಯಿಸಿ ಸಾಸಿವೆ ಹಾಕಿ ಒಗ್ಗರಣೆ ಮಾಡಿ, ತರಕಾರಿಯನ್ನು ಅದರಲ್ಲೆ ಬೇಯಿಸಿ. ಬೆಂದ ತರಕಾರಿಗೆ ಎಷ್ಟು ಉಪ್ಪು ಬೇಕೋ ಅಷ್ಟು ಹಾಕಿ. ಮಿಕ್ಸಿಗೆ ಹಾಕಿದ್ದ ಪೇಸ್ಟ್, ಬೆಂದ ತರಕಾರಿ, ಸ್ವಲ್ಪ ನೀರು ಹಾಕಿ ಕುದಿಸಿ. ಇದು ಹುಳಿಯ ಹದ ಬಂದಾಗ ಕೆಳಗೆ ಇಳಿಸಿ.

- ಶ್ರೀದೇವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com