

ಬೇಕಾಗುವ ಸಾಮಾಗ್ರಿಗಳು
(40 ಕಾರ್ನ್ ರೈಸ್ ಬಾಲ್ಸ್ ಮಾಡಬೇಕಾದರೆ)
ಬೆಣ್ಣೆ- ಮುಕ್ಕಾಲು ಕಪ್
ಮೈದಾ - ಅರ್ಧ ಕಪ್
ಹಾಲು- ಮೂರು ಕಾಲು ಕಪ್
ಬೇಯಿಸಿದ ಅನ್ನ -ಒಂದೂವರೆ ಕಪ್
ಬೇಯಿಸಿ ತರಿಯಾಗಿ ರುಬ್ಬಿದ ಕಾರ್ನ್ -ಒಂದೂವರೆ ಕಪ್
ಕೊತ್ತಂಬರಿ ಸೊಪ್ಪು (ಹೆಚ್ಚಿದ್ದು) -ಅರ್ಧ ಕಪ್
ಹಸಿ ಮೆಣಸಿನಕಾಯಿ - 4-5
ಬ್ರೆಡ್ ಪುಡಿ (ಕೋಟಿಂಗ್‌ಗಾಗಿ)
ಎಣ್ಣೆ (ಕರಿಯಲು ಬೇಕಾದಷ್ಟು)
ಮಾಡುವ ವಿಧಾನ: ಕಾದ ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಅದು ಕರಗುವ ಮುನ್ನ ಮೈದಾ ಹಿಟ್ಟನ್ನು ಹಾಕಿ. ಹಸಿವಾಸನೆ ಹೋಗುವವರೆಗೆ ಕೈಯಾಡಿಸಿ. ನಂತರ ಇದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಹಾಗೆ ಮಾಡ್ತಾ ಇರುವಾಗ ಮಿಶ್ರಣ ಗಟ್ಟಿಯಾಗುತ್ತದೆ. ಈ ಮಿಶ್ರಣವನ್ನು ಕೆಳಗಿಳಿಸಿ ಸ್ವಲ್ಪ ಹೊತ್ತು ಆರಲು ಬಿಡಿ, ಆರಿದ ನಂತರ ಬೇಯಿಸಿದ ಅನ್ನ ಹಾಗೂ ತರಿತರಿಯಾಗಿ ರುಬ್ಬಿದ ಕಾರ್ನ್ಸ್ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಎಲ್ಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ನಂತರ ಎಲ್ಲವನ್ನು ಉಂಡೆಯಾಗಿ ಮಾಡಿಟ್ಟುಕೊಳ್ಳಿ. ಇನ್ನೊಂದು ತಟ್ಟೆಯಲ್ಲಿ 3-4 ಟೇಬಲ್ ಸ್ಪೂನ್ ಮೈದಾ ಹಿಟ್ಟನ್ನು ನೀರಲ್ಲಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ. ಒಂದೊಂದೇ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಬ್ರೆಡ್ ಪೌಡರ್ ಮೇಲೆ ಹೊರಳಿಸಿ ಕಂದು ಬಣ್ಣ ಬರುವ ವರೆಗೆ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಕಾರ್ನ್ ರೈಸ್ ಬಾಲ್ಸ್‌ನ್ನು ಪುದಿನಾ ಚಟ್ನಿ ಅಥವಾ ಸಾಸ್ ನೊಂದಿಗೆ ತಿನ್ನಲು ಸಿದ್ಧ.
-ಪ್ರೀತಿ ವಸಿಷ್ಠ, ಬೆಂಗಳೂರು.
raopreeti3@gmail.com