ಅಲಸಂದೆ ಕಾಳನ್ನು ಚೆನ್ನಾಗಿ ಬೇಯಿಸಿಕೊಂಡು ನಂತರ ಕಾಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಅದಕ್ಕೆ ಈಗ ಗೋಧಿ ಹಿಟ್ಟು, ಕಡಲೆಹಿಟ್ಟು, ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು ಸೇರಿಸಿ ಕಲೆಸಿರಿ.
ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿರಿ. ನಂತರ ಉಂಡೆಗಳನ್ನು ತಯಾರಿಸಿಕೊಳ್ಳಿ. ನಂತರ ಮದ್ಯದಲ್ಲಿ ಎಣ್ಣೆ ಹಾಕುತ್ತಾ ಲಟ್ಟಿಸಿರಿ.
ಈಗ ಒಲೆಯ ಮೇಲೆ ಹೆಂಚು ಇಟ್ಟು ಅದು ಚೆನ್ನಾಗಿ ಕಾದ ನಂತರ ಮೊದಲು ಒಂದು ಚಮಚ ಎಣ್ಣೆ ಹಾಕಿ ರೊಟ್ಟಿ ಹಾಕಿರಿ. ರೊಟ್ಟಿಯ ಎರಡೂ ಮಗ್ಗುಲು ಚೆನ್ನಾಗಿ ಬೇಯಿಸಿರಿ ನಂತರ ತೆಗೆಯಿರಿ. ಈಗ ಸಿದ್ದ ರುಚಿಕರ ಅಲಸಂದಿ ರೊಟ್ಟಿ.