ಹೆಸರು ಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಿರಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿರಿ. ಅಕ್ಕಿ ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿರಿ.
ಅಕ್ಕಿಯು ಬೇಯುವ ಸಮಯದಲ್ಲಿ ಹುರಿದ ಹೆಸರು ಬೇಳೆಯನ್ನು ಹಾಕಿ ಅದಕ್ಕೆ ಒಂದು ಚೂರು ಅರಿಶಿನ ಪುಡಿ ಬೆರೆಸಿ ಕುದಿಯಲು ಬಿಡಿರಿ.
ನಂತರ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ತರುವಾಯ ಜೀರಿಗೆ, ಗೋಡಂಬಿ ಚೂರು ಮತ್ತು ಕಾಳು ಮೆಣಸು ಹಾಕಿ ಚೆನ್ನಾಗಿ ಬಾಡಿಸಿ ಒಲೆಯ ಮೇಲಿನಿಂದ ಕೆಳಗಿಳಿಸಿಕೊಳ್ಳಿರಿ ಅದನ್ನು ಈಗ ಬೆಂದ ಹೆಸರು ಬೇಳೆಗೆ ಬೆರೆಸಿ ಕಲಸಿ. ನಂತರ ತೆಂಗಿನ ತುರಿ. ಉಪ್ಪು ಮತ್ತು ಮಿಕ್ಕ ತುಪ್ಪ ಹಾಕಿ ಕಲಸಿರಿ. ನಂತರ ಸಣ್ಣ ಉರಿಯಲ್ಲಿ ಸ್ವಲ್ಪ ಕಾಲ ಬೇಯಿಸಿ. ಕೆಳಗಿಳಿಸಿದರೆ ರುಚಿಕರವಾದ ಖಾರದ ಪೊಂಗಲ್ ಸಿದ್ದ.