ಆಲೂ ಹಾಟ್ ಪಾಟ್

ಆಲೂ ಹಾಟ್ ಪಾಟ್ ಮಾಡುವ ವಿಧಾನ...
ಆಲೂ ಹಾಟ್ ಪಾಟ್
ಆಲೂ ಹಾಟ್ ಪಾಟ್
Updated on: 

ಪದಾರ್ಥಗಳು

  • ಕಡಲೆಹಿಟ್ಟು- ಅರ್ಧ ಬಟ್ಟಲು
  • ಗೋಧಿ ಹಿಟ್ಟು – 2 ಬಟ್ಟಲು
  • ಅರಿಶಿನ – 2 ಚಿಟಿಕೆ
  • ಎಣ್ಣೆ – 6 ಚಮಚ
  • ಉಪ್ಪು – 1 ಚಮಚ

ಒಗ್ಗರಣೆಗೆ ಬೇಕಾದ ಸಾಮಾಗ್ರಿ

  • ಬೇಯಿಸಿದ ಆಲೂಗಡ್ಡೆ – 5
  • ಹಸಿಮೆಣಸಿನ ಕಾಯಿ – 5
  • ಅಚ್ಚಮೆಣಸಿನಪುಡಿ- ಸ್ವಲ್ಪ
  • ಗರಂ ಮಸಾಲ – ಸ್ವಲ್ಪ
  • ಸಣ್ಣಗೆ ಹೆಚ್ಚಿದ ಶುಂಠಿ – 2 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ನಿಂಬೆಯ ಹಣ್ಣು – 1
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  • ಮೊದಲು ಒಗ್ಗರಣೆಗೆ ಬೇಕಾಗಿ ಬೇಯಿಸಿದ ಆಲೂ, ಅಚ್ಚಮೆಣಸಿನ ಪುಡಿ ಗರಂ ಮಸಾಲ, ನಿಂಬೆಯ ಹಣ್ಣಿನ ರಸ, ನಂತರ ಸಣ್ಣಗೆಹೆಚ್ಚಿಕೊಂಡ ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಸುಮಾರು 1 ಗಂಟೆಗಳ ಕಾಲ ನೆನೆಹಾಕಿರಿ. ಈಗ ಹೂರಣದ ಸಾಮಾನುತಯಾರಾಗುತ್ತದೆ.
  • ಮತ್ತೊಂದೆಡೆ ಕಡಲೆ ಹಿಟ್ಟು, ಗೋಧಿ ಹಿಟ್ಚು, ಅರಿಶಿನ, ಎಣ್ಣೆ, ಉಪ್ಪು, ನೀರು ಹಾಕಿಚೆನ್ನಾಗಿ ಬೆರೆಸಿಪೂರಿ ಹಿಟ್ಟಿನಂತೆ ಮಾಡಿಕೊಳ್ಳಕೊಳ್ಳಬೇಕು.
  • ಈ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಲಟ್ಟಿಸಿಕೊಂಡು ಅದರ ನಡುವೆ ಎರಡು ಚಮಚ ಹೂರಣಹಾಕುತ್ತಾ ಗುಂಡಗೆಸುತ್ತಿಕೊಳ್ಳಿರಿ. ತರುವಾಯ ಅದನ್ನು ಜಿಡ್ಡು ಸವರಿದ ಬೇಕಿಂಗ್ ಡಿಶ್ನಲ್ಲಿ ಜೋಡಿಸಿಕೊಳ್ಳಿರಿ. ಮೊದಲೇ ಬಿಸಿ ಮಾಡಿದ ಓವನ್ ನಲ್ಲಿಟ್ಟು ಕಾಯಿಸಿ.ಈಗ ಅದರ ಮೇಲೆ ತುಪ್ಪ ಸವರಿ ಪುದಿನಾ ಚಟ್ನಿ, ಟೊಮೆಟೊ ಸಾಸ್ ನೊಂದಿಗೆ ಸೇವಿಸಿದರೆ ಬಲುರುಚಿ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com