ಪುದಿನಾ ಎಲೆಗಳನ್ನುಬಿಡಿಸಿಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಪುದಿನಾ ಮತ್ತುಹಸಿಮೆಣಸಿನಕಾಯಿ ಹುರಿದುಕೊಳ್ಳಬೇಕು.
ನಂತರ ಪುದಿನ,ಹಸಿಮೆಣಸಿನಕಾಯಿ, ತೆಂಗಿನ ತುರಿ, ಬೆಳ್ಳುಳ್ಳಿ, ಹುರಿಗಡಲೆ, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿಸೊಪ್ಪು, ಹಾಗೂ ಉಪ್ಪು ಹಾಕಿ ಚೆನ್ನಾಗಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಇಂಗು ಹಾಗೂ ಸಾಸಿವೆಯಒಗ್ಗರಣೆ ಹಾಕಬೇಕು. ರುಚಿಕರ ಪುದೀನಾ ಚಟ್ನಿ ಸಿದ್ಧವಾಗುತ್ತದೆ. ಇದನ್ನು ರಾಗಿ ಮುದ್ದೆ ಹಾಗೂರೊಟ್ಟಿಯೊಂದಿಗೆ ತಿಂದರೆ ಬಹಳ ರುಚಿಕರವಾಗಿರುತ್ತದೆ.