ಅಡುಗೆ

ಅಲಸಂದೆ ಕಾಳಿನ ಹಸಿ ಗೊಜ್ಜು

ಅಲಸಂದೆ ಕಾಳಿನ ಹಸಿ ಗೊಜ್ಜು ಮಾಡುವ ವಿಧಾನ ...

ಅಲಸಂದೆ ಕಾಳಿನ ಹಸಿ ಗೊಜ್ಜು
ಅಲಸಂದೆ ಕಾಳಿನ ಹಸಿ ಗೊಜ್ಜು
Published On :

ಬೇಕಾಗುವ ಪದಾರ್ಥಗಳು...

  • ಅಲಸಂದೆ ಕಾಳು - ಕಾಲು ಕೆ.ಜಿ
  • ಈರುಳ್ಳಿ - 10
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಟೊಮೆಟೋ- 6
  • ಕಾಯಿ ತುರಿ - ಸ್ವಲ್ಪ
  • ಹಸಿಮೆಣಸಿನ ಕಾಯಿ - 20-25
  • ಕರಿಬೇವು - ಸ್ವಲ್ಪ
  • ಸಾಸಿವೆ - ಸ್ವಲ್ಪ
  • ಜೀರಿಗೆ- ಸ್ವಲ್ಬ
  • ಬೆಳ್ಳುಳ್ಳಿ - 10 ಎಸಳು
ಮಾಡುವ ವಿಧಾನ ...
  • ಮೊದಲು ಕುಕ್ಕರಿನಲ್ಲಿ ಅಲಸಂದೆ ಕಾಳು, ಸ್ವಲ್ಪ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಕಾಳು ಬೆಂದ ನಂತರ ನೀರು ಮತ್ತು ಕಾಳು ಬೇರೆ ಮಾಡಬೇಕು.
  • ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, 10 ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಟೊಮೆಟೋವನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು.
  • ರುಬ್ಬಿಕೊಂಡದ್ದನ್ನೆಲ್ಲಾ ಕಾಳು ಬೇಯಿಸಿದ ನೀರಿಗೆ ಹಾಕಬೇಕು. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ 3 ಈರುಳ್ಳಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿದರೆ ಹಸಿ ಗೊಜ್ಜು ತಯಾರಾಗುತ್ತದೆ.
  • ನಂತರ ಬೇಯಿಸಿಕೊಂಡ ಕಾಳಿನ ಒಗ್ಗರಣೆಗಾಗಿ ಒಲೆಯ ಮೇಲೆ ಬಾಣಲೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಬೇಕು. ಇದು ಕೆಂಪಗಾದ ನಂತರ ಈರುಳ್ಳಿ ಹಾಕಬೇಕು. ಈರುಳ್ಳಿ ಸ್ವಲ್ಪ ಬೇಯುತ್ತಿದ್ದಂತೆ ರುಬ್ಬಿ ಕೊಂಡ ಹಸಿಮೆಣಸಿನಕಾಯಿಯನ್ನು ಹಾಕಬೇಕು. ಎಲ್ಲವೂ ಬೆಂದ ನಂತರ ಬೇಯಿಸಿಕೊಂಡ ಕಾಳು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಕೊತ್ತಂಬರಿ ಮತ್ತು ಕಾಯಿತುರಿ ಹಾಕಿದರೆ. ರುಚಿಕರವಾದ ಅಲಸಂದೆ ಕಾಳಿನ ಹಸಿ ಗೊಜ್ಜು ತಯಾರಾಗುತ್ತದೆ.
-ಮಂಜುಳ.ವಿ.ಎನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.