ಸ್ಪೆಷಲ್ ಎಗ್ ಫ್ರೈ

ಸ್ಪೆಷಲ್ ಎಗ್ ಫ್ರೈ ಮಾಡುವ ವಿಧಾನ...
ಸ್ಪೆಷಲ್ ಎಗ್ ಫ್ರೈ
ಸ್ಪೆಷಲ್ ಎಗ್ ಫ್ರೈ
Updated on: 

ಬೇಕಾಗುವ ಪದಾರ್ಥಗಳು

  • ಮೊಟ್ಟೆ 6
  • ಈರುಳ್ಳಿ - 4
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಕರಿಬೇವು- ಸ್ವಲ್ಪ
  • ಸಾಸಿವೆ - ಸ್ವಲ್ಪ
  • ಕಡಲೆಪಪ್ಪು- 100 ಗ್ರಾಂ
  • ಅಚ್ಚ ಖಾರದ ಪುಡಿ - 1 ಚಮಚ
  • ಉಪ್ಪು - 1/2 ಚಮಚ
  • ದನಿಯಾ ಪುಡಿ - 1/2 ಚಮಚ
  • ಬೆಳ್ಳುಳ್ಳಿ - 5-7 ಎಸಳು
  • ಎಣ್ಣೆ - ಸ್ವಲ್ಪ
ಮಾಡುವ ವಿಧಾನ...
  • ಮೊದಲು ಮೊಟ್ಟೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೇಯಿಸಿಕೊಂಡು. ನಂತರ ಮೊಟ್ಟೆಯನ್ನು ಬಿಡಿಸಿ ಒಂದು ಮೊಟ್ಟೆಯನ್ನು 6 ಭಾಗದಂತೆ ಎಲ್ಲಾ ಮೊಟ್ಟೆಯನ್ನು ಕತ್ತರಿಸಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಬೇಕು.
  • ಮಿಕ್ಸಿ ಜಾರ್ ತೆಗೆದುಕೊಂಡು ಇದಕ್ಕೆ ಕಡಲೆಪಪ್ಪು, ಖಾರದಪುಡಿ, ಬೆಳ್ಳುಳ್ಳಿ, ದನಿಯಾಪುಡಿ ಹಾಗೂ ಉಪ್ಪು ಹಾಕಿ ಇದನ್ನು ಪುಡಿ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಬೇಕು. ಇದು ಕೆಂಪಗಾದ ನಂತರ  ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಬೇಕು.
  • ನಂತರ ಇದಕ್ಕೆ ಪುಡಿ ಮಾಡಿಕೊಂಡ ಕಡಲೆಪಪ್ಪು ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 2 ನಿಮಿಷದ ನಂತರ ಬೇಯಿಸಿ ಕತ್ತರಿಸಿದ ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಎಗ್ ಫ್ರೈ ತಯಾರಾಗುತ್ತದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com