ಸೆಟ್ ದೋಸೆ ಮಾಡುವ ವಿಧಾನ

ಬಿಸಿ ಬಿಸಿ ಸೆಟ್ ದೋಸೆ ಮಾಡುವ ವಿಧಾನ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೇಕಾಗುವ ಸಾಮಾಗ್ರಿಗಳು

  • ಇಡ್ಲಿ ಅಕ್ಕಿ: ಒಂದು ಕಪ್
  • ದೋಸೆ ಅಕ್ಕಿ: ಒಂದು ಕಪ್
  • ಉದ್ದಿನ ಬೇಳೆ : ಅರ್ಧ ಕಪ್
  • ಗಟ್ಟಿ ಅವಲಕ್ಕಿ: ಅರ್ಧ ಕಪ್
  • ಮೆಂತ್ಯಕಾಳು: ಒಂದು  ಚಮಚ
  • ಬೆಲ್ಲ- ಸ್ವಲ್ಪ
  • ಉಪ್ಪು: ರುಚಿಗೆ ತಕ್ಕಷ್ಟು
  • ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
  • ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ತೊಳೆದು ಸುಮಾರು 6 ಗಂಟೆ ನೆನೆಸಿ
  • ಮತ್ತೊಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ನೆನೆಸಿ
  • ಇದಾದ ನಂತರ ಮಿಕ್ಸಿ ಅಥವಾ ಗ್ರೈಂಡರ್ ಗೆ ಹಾಕಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ
  • ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಪುಡಿ ಮಾಡಿದ ಬೆಲ್ಲವನ್ನು ಮಿಕ್ಸ್ ಮಾಡಿ
  • (ರಾತ್ರಿ ರುಬ್ಬಿ ಬೆಳಗ್ಗೆ ದೋಸೆ ಹಾಕಿದರೇ ಉತ್ತಮ)
  • ನಂತರ ದೋಸೆ ಹಿಟ್ಟನ್ನು ಮಿಕ್ಸ್ ಮಾಡಿ 2 ಗಂಟೆ ಬಿಡಿ
  • ಸ್ಟವ್ ಮೇಲೆ ಕಾವಲಿ ಇಚ್ಚು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ
  • ಸೌಟಿನಲ್ಲಿ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿ
  • ನಂತರ ಅದರ ಮೇಲೆ ತುರಿದ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ,
  • ಎರಡು ಕಡೆ ಎಣ್ಣೆ ಹಾಕಿ ಬೇಯಿಸಿ, ಸೆಟ್ ದೋಸೆಯನ್ನು ತುಂಬಾ ರೋಸ್ಟ್ ಮಾಡಬಾರದು
  • ಈಗ ಮೃದುವಾದ ಸೆಟ್ ದೋಸೆ ಚಟ್ನಿ ಅಥವಾ ತರಕಾರಿ ಸಾಗು ಜೊತೆ ಸವಿಯಲು ಸಿದ್ಧ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com