ಈರುಳ್ಳಿ ಸಮೋಸಾ

ರುಚಿಕರವಾದ ಈರುಳ್ಳಿ ಸಮೋಸಾ ಮಾಡುವ ವಿಧಾನ...
ಈರುಳ್ಳಿ ಸಮೋಸಾ
ಈರುಳ್ಳಿ ಸಮೋಸಾ
ಬೇಕಾಗುವ ಪದಾರ್ಥಗಳು...
  • ಈರುಳ್ಳಿ- ಕತ್ತರಿಸಿದ್ದು 1 ಬಟ್ಟಲು
  • ಪೇಪರ್ ಅವಲಕ್ಕಿ - 1 ಚಿಕ್ಕ ಬಟ್ಟಲು
  • ಖಾರದ ಪುಡಿ - 1 ಚಮಚ
  • ಗರಂ ಮಸಾಲಾ - ಅರ್ಧ ಚಮಚ
  • ಆಮ್ ಚೂರ್ ಪುಡಿ - ಅರ್ಧ ಚಮಚ
  • ಉಪ್ಪು - ಅರ್ಧ ಚಮಚ
  • ಶುಂಠಿ ಪೇಸ್ಟ್ - ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು - ಕತ್ತರಿಸಿದ್ದು ಸ್ವಲ್ಪ
  • ಗೋಧಿ ಹಿಟ್ಟು - 1 ಚಿಕ್ಕ ಬಟ್ಟಲು
  • ಮೈದಾ ಹಿಟ್ಟು - 1 ಚಿಕ್ಕ ಬಟ್ಟಲು
  • ಸಕ್ಕರೆ - ಕಾಲು ಚಮಚ
  • ಉಪ್ಪು - ಅರ್ಧ ಚಮಚ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
  • ಈರುಳ್ಳಿ, ಪೇಪರ್ ಅವಲಕ್ಕಿ. ಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪುಡಿ. ಉಪ್ಪು. ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಗೋಧಿ ಹಿಟ್ಟು, ಮೈದಾಹಿಟ್ಟು, ಸಕ್ಕರೆ, ಉಪ್ಪನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ 3-4 ಚಮಚ ಎಣ್ಣೆಯನ್ನು ಕಾಯಿಸಿ ಮಿಶ್ರಣ ಮಾಡಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಕಲಸಿದ ಹಿಟ್ಟು 30 ನಿಮಿಷಗಳ ನೆನೆಯಲು ಬಿಡಬೇಕು. 
  • ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಒಂದೊಂದು ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿಕೊಂಡು ಸಮೋಸಾ ಆಕಾರ ಮಾಡಿಕೊಳ್ಳಬೇಕು. ನಂತರ ಇದರ ಮಧ್ಯೆ ಈ ಹಿಂದೆ ಮಾಡಿಕೊಂಡ ಈರುಳ್ಳಿ ಮಸಾಲೆಯನ್ನ ಹಾಕಿ ತುಂಬಬೇಕು. ಬಳಿಕ ಸಮೋಸಾವನ್ನು ಕ್ಲೋಸ್ ಮಾಡಲು ಸ್ವಲ್ಪ ಮೈದಾ ಹಿಟ್ಟನ್ನು ತೆಗೆದುಕೊಂಡು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಸಮೋಸಾ ಬದಿಗಳಲ್ಲಿ ಹಾಕಿ ಮುಚ್ಚಬೇಕು.
  • ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ, ಕಾಯಲು ಬಿಡಬೇಕು. ಎಣ್ಣೆ ಕಾದ ಬಳಿಕ ತಯಾರು ಮಾಡಿಕೊಂಡ ಸಮೋಸಾಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಚೆನ್ನಾಗಿ ಕರಿದರೆ ರುಚಿಕರವಾದ ಈರುಳ್ಳಿ ಸಮೋಸಾ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com