ಹಲಸಿನ ಬೀಜದ ಹಲ್ವಾ | Jackfruit seed halwa Recipe in Kannada

ರುಚಿಕರವಾದ ಹಲಸಿನ ಬೀಜದ ಹಲ್ವಾ ಮಾಡುವ ವಿಧಾನ...
jackfruit seed halwa
ಹಲಸಿನ ಬೀಜದ ಹಲ್ವಾ
Updated on

ಬೇಕಾಗುವ ಪದಾರ್ಥಗಳು...

  • ಹಲಸಿನ ಬೀಜ – 30

  • ಬೆಲ್ಲ – 200 ಗ್ರಾಂ

  • ತುಪ್ಪ- ಸ್ವಲ್ಪ

  • ದ್ರಾಕ್ಷಿ-ಸ್ವಲ್ಪ

  • ಗೋಡಂಬಿ- ಸ್ವಲ್ಪ

  • ಏಲಕ್ಕಿ ಪುಡಿ– ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಕುಕ್ಕರ್ ನಲ್ಲಿ ಹಲಸಿನ ಬೀಜ ಹಾಗೂ ನೀರು ಹಾಕಿ ಬೇಯಲು ಇಡಿ. 8 ವಿಸಿಲ್ ಕೂಗಿಸಿ. ಬಳಿಕ ಬೆಂದ ಹಲಸಿನ ಬೀಜ ತಣಿದ ಬಳಿಕ ಹೊರಗಿನ ಸಿಪ್ಪೆ ತೆಗೆಯಿರಿ.

  • ಪಾತ್ರೆಯೊಂದಕ್ಕೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿಸಿ. ಸಿಪ್ಪೆ ತೆಗೆದ ಹಲಸಿನ ಬೀಜ ಹಾಗೂ ಕರಗಿಸಿದ ಬೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

  • ಬಳಿಕ ಒಂದು ಪಾತ್ರೆಗೆ ಅರ್ಧ ಕಪ್ ನಷ್ಟು ತುಪ್ಪ ಹಾಕಿ ರುಬ್ಬಿರುವ ಮಿಶ್ರಣವನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಬೇಯಿಸಿ. ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ತಳ ಬಿಡುತ್ತಾ ಬರುವಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ. ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ಹಲಸಿನ ಬೀಜದ ಹಲ್ವಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com