ಆಲೂ ಸೇವ್ - Aloo sev recipe in Kannada

ರುಚಿಕರವಾದ ಆಲೂ ಸೇವ್ ಮಾಡುವ ವಿಧಾನ...
aloo sev
ಆಲೂ ಸೇವ್
Updated on

ಬೇಕಾಗುವ ಪದಾರ್ಥಗಳು...

  • ಆಲೂಗಡ್ಡೆ -4

  • ಅಕ್ಕಿ ಹಿಟ್ಟು- 1 ಬಟ್ಟಲು

  • ಉಪ್ಪು- ರುಚಿಗೆ ತಕ್ಕಷ್ಟು

  • ಅಚ್ಚ ಖಾರದ ಪುಡಿ- 1 ಚಮಚ

  • ಅರಿಶಿಣದ ಪುಡಿ- ಅರ್ಧ ಚಮಚ

  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ನುಣ್ಣಗೆ ಮಾಡಿಕೊಳ್ಳಿ

  • ಇದಕ್ಕೆ ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

  • ಇದೀಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಈಗ ಚಕ್ಕುಲಿ ಅಚ್ಚು ತೆಗೆದುಕೊಂಡು ರೆಡಿ ಮಾಡಿಕೊಂಡಿರುವ ಹಿಟ್ಟನ್ನು ಅದರ ಒಳಗೆ ಹಾಕಿ ನೇರವಾಗಿ ಎಣ್ಣೆಯೊಳಗೆ ಬಿಡಿ. ಚಕ್ಕುಲಿ ಎಷ್ಟು ಉದ್ದವಾದರು ಬರಲಿ ಅಥವಾ ಸಣ್ಣದಾಗಿ ಕಟ್ ಆದರೂ ಸಮಸ್ಯೆಯಿಲ್ಲ. ಬಳಿಕ ಚೆನ್ನಾಗಿ ಕರಿಯಲು ಬಿಡಿ. ಸಣ್ಣ ಉರಿಯಲ್ಲಿ ಗರಿಗರಿಯಾಗುವಂತೆ ಕರಿದರೆ ರುಚಿಕರವಾದ ಆಲೂ ಸೇವ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com