

ವಿಟಮಿನ್, ಖನಿಜಗಳಿಂದ ತುಂಬಿರುವ ಬಾದಾಮಿ ಮಹಿಳೆಯರಿಗೆ ಅಗಾಧ ಶಕ್ತಿ ನೀಡಬಲ್ಲದು. ಇದರಲ್ಲಿ ಶಕ್ತಿ ಉತ್ಪಾದನೆಗೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್‌ಗಳು, ಮ್ಯಾಂಗನೀಸ್, ರೈಬೋಫ್ಲೇವಿನ್ ಮತ್ತು ಕಾಪರ್‌ಗಳಿಂದ ಸಂಪದ್ಭರಿತವಾಗಿದೆ.
ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಬಿಡುವಿಲ್ಲದ ಮಹಿಳೆಗೆ ಶಕ್ತಿ ಬೇಕು. ಉದ್ಯೋಗಸ್ಥೆಯಾಗಿರಲಿ ಅಥವಾ ಗೃಹಿಣಿಯಾಗಿರಲಿ ನಿಯಮಿತವಾಗಿ ಬಾದಾಮಿಗಳನ್ನು ತಿನ್ನುವುದರಿಂದ ಒಟ್ಟಾರೆ ಆರೋಗ್ಯದೆಡೆ ಗಮನ ಹರಿಸಬಹುದು. ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಬೊಜ್ಜು ಮತ್ತು ಮಧುಮೇಹ ನಮ್ಮ ಜೀವನ ಶೈಲಿಯೊಂದಿಗೆ ಲಿಂಕ್ ಹೊಂದಿರುತ್ತವೆ. ಭಾರತೀಯ ಸ್ತ್ರೀಯರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವುದು ಹೆಚ್ಚು. 'ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್' ಪ್ರಕಟಿಸಿರುವ ವರದಿ ಪ್ರಕಾರ ಶೇ.30 ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯುನಂಥವು. ಬಾದಾಮಿ ಹೆಚ್ಚಾಗಿರುವ ಮೆಡಿಟರೇನಿಯನ್ ಡಯೆಟ್ಟಿಗೆ ಬದಲಾಯಿಸಿಕೊಂಡರೆ, ಕೊಬ್ಬು ನಿಯಂತ್ರಣ ಪಥ್ಯದಲ್ಲಿ ಇರುವವರಿಗಿಂತ ಕಡಿಮೆಯಾಗುತ್ತದೆ.
ಬಾದಾಮಿಯಲ್ಲಿ ಕೊಬ್ಬಿನಂಶ ಪ್ರಧಾನವಾಗಿ ಆರೋಗ್ಯಕರ ಮೊನೊ- ಸ್ಯಾಚುರೇಟೆಡ್ ಫ್ಯಾಟ್ ಇದೆ. ಇದು ಕೆಟ್ಟ ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡುತ್ತದೆ. ಬಾದಾಮಿಯು ಫೋಲಿಕ್ ಆಮ್ಲ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳಿಂದ (ರೋಗಗಳೊಂದಿಗೆ ಹೊಡೆದಾಡುವ ನೈಸರ್ಗಿಕ ವಸ್ತುಗಳು) ಸಮೃದ್ಧವಾಗಿದ್ದು ಹೃದ್ರೋಗ ಮತ್ತು ಮಧುಮೇಹಗಳನ್ನು ತಡೆಗಟ್ಟಬಲ್ಲದು.
ಒಂದು ಔನ್ಸ್ (23 ಬಾದಾಮಿಗಳು) ಬಾದಾಮಿ ವಿಟಮಿನ್ ಇ, ಕ್ಯಾಲ್ಸಿಯಂ, ಅಗತ್ಯ ಕೊಬ್ಬು, ಡಯೆಟರಿ ನಾರಿನಂಶ ಮತ್ತು ಸಸ್ಯಜನ್ಯ ಪ್ರೊಟೀನ್, 13 ಗ್ರಾಂಗಳಷ್ಟು ಅನ್‌ಸ್ಯಾಚುರೇಟಡ್ ಕೊಬ್ಬು, 129 ಕ್ಯಾಲೊರಿಗಳಂಥ ನೈಸರ್ಗಿಕ ಜೀವಾಧಾರಕ ಪೋಷಕಾಂಶಗಳನ್ನು ಹೊಂದಿರುವುದಲ್ಲದೇ, ಶೇ.100 ಕೊಲೆಸ್ಟರಾಲ್ ಮುಕ್ತವಾಗಿದೆ.
ಕ್ಯಾನ್ಸರ್‌ಗೆ ಫ್ಲಾವೆನಾಯ್ಡ್‌ಗಳು
ಈಗ ಸ್ತನ ಕ್ಯಾನ್ಸರ್ ಕಾಮನ್. ಫ್ಲಾವೆನಾಯ್ಡ್‌ಗಳು ಶರೀರದಲ್ಲಿನ ಕ್ಯಾನ್ಸರ್‌ಕಾರಕ ವಸ್ತುಗಳನ್ನು ನೈಸರ್ಗಿಕವಾಗಿ ತೆಗೆದುಹಾಕುವುದು ಸಂಶೋಧನೆಗಳಿಂದ ಸಾಬೀತಾಗಿದೆ. ನೈಸರ್ಗಿಕವಾಗಿ ಫ್ಲಾವೆನಾಯ್ಡ್‌ಗಳನ್ನು ಹೊಂದಿರುವ ಬಾದಾಮಿ, ಹಸಿರೆಲೆ ತರಕಾರಿಗಳು, ಟೀ, 'ಸಿ' ವಿಟಮಿನ್ ಇರುವ ಹಣ್ಣು ಮತ್ತು ಬೆರ್ರಿಗಳು, ಪ್ರತಿವರ್ಷವೂ ವರದಿಯಾಗುತ್ತಿರುವ 1.3 ದಶಲಕ್ಷ ಸ್ತನ ಕ್ಯಾನ್ಸರಿನ ಹೊಸ ಪ್ರಕರಣಗಳ ಪೈಕಿ ನೀವೂ ಒಬ್ಬರಾಗುವ ಸಾಧ್ಯತೆಯನ್ನು ಪ್ರತಿರೋಧಿಸಲು ನೆರವಾಗುತ್ತದೆ.
ಎಲಬು ಗಟ್ಟಿಯಾಗಿರಲಿ...
30ರ ಆಸುಪಾಸಿನಲ್ಲಿ ಸ್ತ್ರೀಯರಿಗೆ ಅಸ್ಥಿರಂಧ್ರತೆ ಕ್ಷೀಣಗೊಳ್ಳಲು ಆರಂಭಿಸಿ, ರಜೋನಿವೃತ್ತಿಯ 3-5 ವರ್ಷಗಳ ಆಸುಪಾಸಿನವರೆಗೂ ವೇಗೋತ್ಕರ್ಷಗೊಳ್ಳುತ್ತದೆ. ನಂತರ ವಾರ್ಷಿಕವಾಗಿ 1-1.5ರಷ್ಟು ಕ್ಷೀಣಗೊಳ್ಳುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂಗಳು ಸಮೃದ್ಧವಾಗಿರುವ ಸೋಯಾಬೀನ್, ಹಸಿರು ತರಕಾರಿಗಳು, ಸಾಸಿವೆ ಮತ್ತು ಬಾದಾಮಿಗಳ ನಿಯಮಿತ ಸೇವನೆಯು ಈ ಕಾಯಿಲೆಯನ್ನು ತಡೆಗಟ್ಟಬಲ್ಲದು.
ಏಕೋ ಬೇಜಾರು...
ಮಹಿಳೆಯರಲ್ಲಿ ಆತಂಕ, ಖಿನ್ನತೆ ಮತ್ತು ಮೆದುಳಿನ ಬಳಲಿಕೆಗಳು ಸಾಮಾನ್ಯ. ಇವು ಬಾಂಧವ್ಯ ಮತ್ತು ವೃತ್ತಿಯನ್ನು ಹಾಳುಗೆಡವುತ್ತದೆ. ಕೆಲವೊಮ್ಮೆ ಇಂಥ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಉಪಚಾರ ಕೊಡಲಾಗುವುದಿಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ಕ್ಯಾರೆಟ್, ಬಾಳೆಹಣ್ಣು, ಪೀಚ್, ಹೋಲ್‌ಗ್ರೈನ್ ಆಹಾರಗಳು, ಮೊಳಕೆ ಕಾಳುಗಳು ಮತ್ತು ಮೊಸರುಗಳನ್ನು ಸೇರಿಸಿಕೊಂಡು ಸಂತೋಷಭರಿತ ಉತ್ಪಾದಕ ದಿವಸವನ್ನು ಹೊಂದಬಹುದು. ಒಂದು ಹಿಡಿ ಬಾದಾಮಿ ಸೇವನೆಯಿಂದ ಅದರಲ್ಲಿರುವ ಸತುವಿನ ಅಂಶ ನಿಮ್ಮ ಉತ್ಸಾಹವನ್ನು ವರ್ಧಿಸಿ, ಸಮತೋಲಿತ ಮನ ಸ್ಥಿತಿ ಹೊಂದಲು ನೆರವಾಗುತ್ತದೆ.
ರಕ್ತಹೀನತೆಗೂ ಮದ್ದು
ದೇಶದಲ್ಲಿನ ಶೇ.50 ಸ್ತ್ರೀಯರಿಗೆ ರಕ್ತಹೀನತೆಯಿದೆ. ಅಲ್ಲದೆ, ಹಿಮೋಗ್ಲೋಬಿನ್‌ನ ಪ್ರಮಾಣ ವಿಶ್ವಾದ್ಯಂತ ಅಂಗೀಕರಿಸಲಾದ 12 ಗ್ರಾಂ ಡೆಸಿಲೀಟರ್‌ನ ಅಂಗೀಕೃತ ಮಾನದಂಡಕ್ಕಿಂತ ಕಡಿಮೆಯಾಗಿದೆ. ತಾಮ್ರ, ಕಬ್ಬಿಣ ಇತರೆ ಜೀವಸತ್ವಗಳನ್ನು ತೆಗೆದುಕೊಂಡರೆ ಶರೀರದಲ್ಲಿನ ಕೆಂಪು ರಕ್ತ ಕಣಗಳ ಕೊರತೆ ನೀಗಿಸಬಹುದು. ಒಂದು ಹಿಡಿ ಬಾದಾಮಿ ಸೇರಿಸುವುದರಿಂದ ನಿಮಗೆ ಅಧಿಕ ಪ್ರಮಾಣದಲ್ಲಿ ತಾಮ್ರ ಅಂದರೆ 100 ಗ್ರಾಂಗೆ 1.15 ಮಿಗ್ರಾಂಗಳಷ್ಟು ದೊರಕುತ್ತದೆ.
-ಶೀಲಾ ಕೃಷ್ಣಸ್ವಾಮಿ
ಡಯೆಟ್, ನ್ಯೂಟ್ರಿಷನ್ ಮತ್ತು ವೆಲ್‌ನೆಸ್ ತಜ್ಞೆ