

ಸಿಹಿ ಇರಲಿ, ಕಹಿ ಇರಲಿ ಗರ್ಭಿಣಿಯರಿಗೆ ಕಂಡಿದ್ದೆಲ್ಲಾ ತಿನ್ನಬೇಕೆಂಬ ಆಸೆ. ತಿನ್ನಲು ಕುಳಿತರೆ ಏನೂ ಸೇರುವುದಿಲ್ಲ. ಒಂದೆರಡು ತುತ್ತು ತಿಂದು ಮೇಲೇಳುತ್ತಾರೆ. ಆ ಮೇಲೆ ಮತ್ತೊಂದರೆಡೆ ಗಮನಹರಿಸುತ್ತಾರೆ. ಮಾಡರ್ನ್ ಯುಗದಲ್ಲಿ ಮೈಮಾಟ ಚೆನ್ನಾಗಿರಲೆಂದು ಡಯೆಟ್ ಮಾಡಿದವರಿಗಂತೂ ತುಸು ಕಷ್ಟವೇ ಸರಿ. ಅದು ಬೇಡ, ಇದು ಬೇಡ ಎಂಬ ರಗಳೆಯ ಮಧ್ಯೆ 'ಬಯಕೆ' ಬೆಟ್ಟದಷ್ಟಾಗುತ್ತದೆ. 'ಇಷ್ಟ- ಕಷ್ಟ'ದ ಬಯಕೆ ಮಾತ್ರ ತೀರುವುದಿಲ್ಲ. ಹೀಗಾಗಿ ಬದಲಾದ ಜೀವನ ಶೈಲಿಯಲ್ಲಿ ಗರ್ಭಿಣಿಯರಿಗೆ ಉತ್ತಮ ಹಾಗೂ ಆರೋಗ್ಯಕರವಾದ 'ಫಾಸ್ಟ್ ಫುಡ್' ಟಿಪ್ಸ್ ಇಲ್ಲಿವೆ...