

ಸ್ಪೇನ್ ವಿಜ್ಞಾನಿಗಳು ಎದೆಹಾಲಿನ ಮಹತ್ವ ಹೆಚ್ಚಿಸುವಂಥ ಸಂಶೋಧನೆಯೊಂದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಮಗುವಿನ ಬೆಳವಣಿಗೆಗೆ ಬೇಕಾದ 700 ಬಗೆಯ ಬ್ಯಾಕ್ಟೀರಿಯಾಗಳು ಈ ಹಾಲಿನಲ್ಲಿವೆ ಎನ್ನುತ್ತಾರೆ.
ತಾಯಿಯಿಂದ ಎದೆಹಾಲು ಪಡೆಯುವ ಮಗು ಯಾವ ರೀತಿ ಬೆಳವಣಿಗೆ ಹೊಂದುತ್ತವೆ ಎಂಬುದನ್ನೂ ಈ ಸಂಶೋಧನೆ ಹೇಳಿದೆ. ಮೈಕ್ರೋಬಯೋವ್ ಎಂದು ಕರೆಯಲಾಗುವ ಈ ಬ್ಯಾಕ್ಟೀರಿಯಾಗಳ ಅಧ್ಯಯನಕ್ಕಾಗಿ ಸ್ಪೇನ್‌ನ ಸಂಶೋಧಕರು ಡಿಎನ್‌ಎ ಪರೀಕ್ಷೆ ಮೊರೆ ಹೋಗಿದ್ದಾರೆ. ಇನ್ನೂ ವಿಶೇಷವೆಂದರೆ ಗರ್ಭಿಣಿ ಹಂತದಲ್ಲಿ ದಪ್ಪಗಾಗಿರುವ ತಾಯಿಯ ಎದೆಹಾಲಿನಲ್ಲಿ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ. ಈ ಸಂಶೋಧನೆಯ ಪ್ರಮುಖ ಉದ್ದೇಶ ಎದೆಹಾಲು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯೋ ಅಥವಾ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆಯೋ ಎಂಬುದನ್ನು ಕಂಡು ಹಿಡಿಯುವುದಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಒಂದು ವಿಚಾರಕ್ಕೆ ಅಂಟಿಕೊಂಡರದೇ ಇದ್ದರೂ, ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಬಹುದು ಎಂದು ಹೇಳಿದೆ.