

ಎಲ್ಲರೂ ಚಿನ್ನ, ಬೆಳ್ಳಿ ಮಾಡಿಸಿಕೊಳ್ಳಲು ಹೆಣಗುತ್ತಾರೆ. ಕಬ್ಬಿಣವನ್ನು ಮಾತ್ರ ಎಲ್ಲರೂ ಇಗ್ನೋರ್ ಮಾಡುತ್ತಾರೆ. ಆದರೆ, ಅದು ದೇಹದಲ್ಲಿ ಕಬ್ಬಿಣ ಪ್ರಮಾಣ ಕಡಿಮೆಯಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ವಿಶ್ವದಲ್ಲಿ ಅನೀಮಿಯಾದಿಂದ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗ ಬಳಲುತ್ತಿದೆ. ಕಬ್ಬಿಣ ಅಂಶದ ಕೊರತೆಯಿಂದ ಉಂಟಾಗುವ ಈ ಸಮಸ್ಯೆಗೆ ತುತ್ತಾಗಿರುವ ದೇಶಗಳಲ್ಲಿ ಭಾರತವೂ ಒಂದು. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ಅನ್ವಯ ಮಕ್ಕಳಲ್ಲಿ ಶೇ.70-80, ಗರ್ಭಿಣಿಯರಲ್ಲಿ ಶೇ.70 ಹಾಗೂ ಶೇ.24 ಪುರುಷರು ಅನೀಮಿಯಾದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೀಡಾಗುವುದರಲ್ಲಿ ಸಸ್ಯಾಹಾರಿಗಳೇ ಹೆಚ್ಚು. ಉಸಿರಾಟದ ವೈಫಲ್ಯ, ಹೃದಯಾಘಾತ, ಕಡಿಮೆ ರಕ್ತದೊತ್ತಡ, ಬಳಲಿಕೆ, ಪೇಲವ ಅಥವಾ ತಣ್ಣಗಿನ ಚರ್ಮ, ಕಡಿಮೆ ತೂಕದ ಮಗುವಿನ ಜನನ... ಎಲ್ಲವಕ್ಕೂ ಸಾಮಾನ್ಯವಾಗಿ ಅನೀಮಿಯಾವೇ ಕಾರಣ. ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಬಹುದಾದ ಈ ಕೊರತೆಯನ್ನು ವೈದ್ಯರ ಮಾರ್ಗದರ್ಶನದಿಂದ ಸರಿಪಡಿಸಿಕೊಳ್ಳುವುದೊಳಿತು.
ಮಗುವನ್ನು ನಿರೀಕ್ಷಿಸುತ್ತಿರುವ ತಾಯಂದಿರು ಮತ್ತು 12 ವರ್ಷಗಳ ಒಳಗಿನ ಮಕ್ಕಳಿಗೆ ಅಪೌಷ್ಟಿಕತೆ ಅರಿವು ಮೂಡಿಸಲು ದೆಹಲಿಯ ಎಐಐಎಂಎಸ್, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮತ್ತು ಫೊಗ್ಲಿ ಸಹಯೋಗದಲ್ಲಿ 'ಲಾಂಚ್ ಆಫ್ 12 ಬೈ 12 ಇನಿಷಿಯೇಟಿವ್' ಅನೀಮಿಯಾ ತಪ್ಪಿಸಲು ವ್ಯವಸ್ಥಿತ ಆಹಾರ ಸೇವನೆ ಅಗತ್ಯ ಎನ್ನುತ್ತದೆ.
ಎಲ್ಲಿರುತ್ತೆ ಐರನ್?
ಸೋಯಾಬೀನ್, ಹಸಿರೆಲೆಗಳುಳ್ಳ ತರಕಾರಿ, ಬೀಜಗಳು, ಖರ್ಜೂರ, ಒಣ ಹುರುಳಿಕಾಯಿ ಇತ್ಯಾದಿಗಳಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತವೆ. ಆದರೆ, ಅತಿ ಹೆಚ್ಚು ಕಾಫಿ ಅಥವಾ ಟೀ ಸೇವನೆಯಿಂದ ಆಹಾರದಲ್ಲಿನ ಕಬ್ಬಿಣಾಂಶ ಹೀರಿಕೊಳ್ಳಲು ಅಡತಡೆಯಾಗುತ್ತದೆ. ಮಾಂಸಾಹಾರಿಗಳು ನೇರವಾಗಿ ಪ್ರಾಣಿ ಮೂಲದಿಂದ ಕಬ್ಬಿಣಾಂಶ ಪಡೆಯಬಹುದು.
ಹಾಗಂತ ನೀವು ಸಸ್ಯಾಹಾರಿಗಳಾಗಿದ್ದರೆ, ಮಾಂಸಹಾರಿಗಳಾಗಿ ಎಂದಲ್ಲ. ಕೆಲವು ಸಲಹೆಗಳನ್ನು ಫಾಲೋ ಮಾಡಿ...
ಜಂಕ್ ಫುಡ್‌ಗೆ ಹೇಳಿ ಬೈ