ಭುಜಪೀಡಾಸನ

Updated on: 

ಹೀಗೆ ಮಾಡಿ: ಮೊದಲಿಗೆ ನಿಂತುಕೊಂಡು ಕಾಲುಗಳನ್ನು ಅಗಲಿಸಿ. ಬಳಿಕ ಮುಂದಕ್ಕೆ ಬಾಗಿ ಮಂಡಿಗಳನ್ನು ಬಗ್ಗಿಸಿ. ಕಾಲುಗಳ ಮಧ್ಯೆ ಅಂಗೈಗಳನ್ನು ನೆಲದ ಮೇಲೆ ಊರಿಡಿ. ಅವುಗಳ ಮಧ್ಯೆಯೂ ಅಂತರವಿರಲಿ. ತೊಡೆಗಳ ಹಿಂಬದಿಯನ್ನು ಮೇಲ್‌ತೋಳುಗಳ ಹಿಂಬದಿ ಮೇಲೆ ಒರಗಿಸಿಟ್ಟು, ಹೆಗಲು ಮತ್ತು ಮೊಣಕೈಗಳ ಮಧ್ಯಕ್ಕೆ ಬರುವಂತೆ ಮಾಡಿ. ಬಳಿಕ ಉಸಿರನ್ನು ಹೊರ ಬಿಟ್ಟು ನಿಧಾನವಾಗಿ ಕಾಲು ಬೆರಳುಗಳನ್ನು ನೆಲದಿಂದ ಮೇಲಕ್ಕೆ ಎತ್ತಿ. ಈ ಹಂತದಲ್ಲಿ ದೇಹದ ಭಾರ ಕೈಗಳ ಮೇಲೆ ಹಾಕಿ ಸಮತೋಲನ ಕಾಪಾಡಿ. ಬಳಿಕ ಕಾಲುಗಳನ್ನು ಒಂದಕ್ಕೊಂದು ಸಿಕ್ಕಿಸಿ. ಈ ಸ್ಥಿತಿಯಲ್ಲಿ ಸಹಜವಾಗಿ ಉಸಿರಾಡುತ್ತ ನಿಮಗೆ ಎಷ್ಟ ಸಾಧ್ಯವಾಗುತ್ತದೋ ಅಷ್ಟು ಕಾಲ ಇರಲು ಪ್ರಯತ್ನಿಸಿ. ಬಳಿಕ ಕಾಲುಗಳನ್ನು ಒಂದೊಂದಾಗಿ ಹಿಂದಕ್ಕೆ ತಂದು, ಒಂದಕ್ಕೊಂದು ತೊಡರಿಸಿಕೊಂಡಿರುವ ಪಾದಗಳನ್ನು ಬಿಡಿಸಿ, ನೆಲದ ಮೇಲೆ ಊರಿಡಿ. ಬಳಿಕ ತಾಡಾಸನ ಸ್ಥಿತಿಗೆ ಬಂದು, ಸಹಜ ಸ್ಥಿತಿಗೆ ಮರಳಿ.
ಪ್ರಯೋಜನ: ಕೈಗಳು, ಮಣಿಕಟ್ಟುಗಳು, ತೋಳಿನ ಸ್ನಾಯುಗಳಿಗೆ ಬಲ ದೊರೆಯುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com