ಆರೋಗ್ಯ-ಜೀವನಶೈಲಿ

ಸ್ಟ್ರಾಬೆರಿ ಸ್ಟ್ರಾಂಗು ಮರಿ!

ಸ್ಟ್ರಾಬೆರಿ ಸ್ಟ್ರಾಂಗು ಮರಿ!
Published On :

'ನಿತ್ಯ ಸೇಬು ತಿಂದು, ವೈದ್ಯರಿಂದ ದೂರ ಇರಿ' ಎಂಬ ಆರೋಗ್ಯದಾಯಕ ಸಾಲುಗಳ 'ಸೇಬು' ಜಾಗದಲ್ಲಿ ಸ್ಟ್ರಾಬೆರಿಯನ್ನೂ ಸೇರಿಸಬಹುದು. ಹೇರಳವಾದ ಪೌಷ್ಟಿಕಾಂಶ ಹೊಂದಿರುವ ಸ್ಟ್ರಾಬೆರಿಗೆ ಬಹು ಬೇಡಿಕೆ ಇದೆ. ಕಡುಗೆಂಪು ಬಣ್ಣ ಹೊಂದಿದ ರಸವತ್ತಾದ ಸ್ಟ್ರಾಬೆರಿಗೆ ಕನ್ನಡದಲ್ಲಿ 'ನೆಲಮುಳ್ಳಿ ಹಣ್ಣು' ಎಂದೂ ಕರೆಯುತ್ತಾರೆ.
ಬಣ್ಣ, ರುಚಿ, ಶಕ್ತಿ- ಇವೆಲ್ಲವೂ ಸ್ಟ್ರಾಬೆರಿಯ ಖ್ಯಾತಿಯನ್ನು ಹೆಚ್ಚಿಸಿವೆ. ಉತ್ತರ ಅಮೆರಿಕ ಮೂಲದ ಹಣ್ಣಿಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ಅಲ್ಲದೆ ಅಮೆರಿಕ, ಟರ್ಕಿ, ಸ್ಪೇನ್, ಈಜಿಪ್ಟ್, ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಭಾರತದ ನೀಲಗಿರಿ, ಡಾರ್ಜಿಲಿಂಗ್ ಬೆಟ್ಟಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಬೆಳಯಲಾಗುತ್ತಿದ್ದು, ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಒಂದು ಕಪ್ ಸ್ಟ್ರಾಬೆರಿ ಹಣ್ಣು 45 ಕ್ಯಾಲೊರಿ ಒಳಗೊಂಡಿರುತ್ತದೆ. ವಿಟಮಿನ್ 'ಸಿ' ಹಾಗೂ ಫ್ಯಾಮೋನೈಡ್ಸ್ಗಳನ್ನು ಒದಗಿಸುವ ಅತ್ಯಂತ ಉತ್ತಮ ಮೂಲವಾಗಿದೆ.
ಲಾಭಗಳೇನು?

  • ಸ್ಟ್ರಾಬೆರಿಯಲ್ಲಿರುವ ಫಿನಾಲ್ಗಳು ಹಲವು ರೋಗಗಳು ಮತ್ತು ಅಸ್ವಸ್ಥತೆಯ ವಿರುದ್ಧ ಹೋರಾಡುತ್ತವೆ.
  • ಮನುಷ್ಯನ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ 'ಸಿ'ನ ಉತ್ತಮ ಮೂಲ.
  • ಸ್ಟ್ರಾಬೆರಿ ಹಣ್ಣು ಕ್ಯಾನ್ಸರ್ ರೋಗಿಗೆ ಉತ್ತಮ ಮತ್ತು ಆ್ಯಕ್ಸಿಡಿಕಾರಕ್ ಮತ್ತು ಆ್ಯಂಟಿಇನ್ಫಾಮ್ಯಾಟರಿ ಸಂಯೋಜನೆಯೊಂದಿಗೆ ವಿವಿಧ ರೂಪಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
  • ನೇತ್ರ ಶಕ್ತಿ ವೃದ್ಧಿಗೆ ಸಹಾಯಕ. ಕಣ್ಣಿನ ನೋವು, ದೃಷ್ಟಿದೋಷದಂಥ ಸಮಸ್ಯೆಗಳಿಗೆ ಪರಿಣಾಮಕಾರಿ ಮದ್ದು.
  • ಸ್ಟ್ರಾಬೆರಿ ಹಣ್ಣು ತಿನ್ನುವುದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
  • ಮಕ್ಕಳಿಗೆ ಚಾಕೊಲೆಟ್, ಐಸ್ಕ್ರೀಂಗಳಲ್ಲಿ ಬಳಸಿ ಸ್ಟ್ರಾಬೆರಿ ನೀಡಲಾಗುತ್ತದೆ. ಇದು ಕೊಲೆಸ್ಟ್ರಾಲ್ ತಗ್ಗಿಸಲು ಕೂಡ ಸಹಾಯಕ.
  • ಹೃದ್ರೋಗ ತಡೆಯುತ್ತದೆ.
  • ಹೆಸರು ಸಿಹಿಯಾಗಿದ್ದರೂ ಬಹುವಾಗಿ ಕಾಡುವ ಸಕ್ಕರೆ ಕಾಯಿಲೆಗೆ ಸ್ಟ್ರಾಬೆರಿ ಉತ್ತಮ ಔಷಧಿ.
- ಅರವಿಂದ ಇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.