ಎವರ್ ಗ್ರೀನ್ ಟೀ

ಕಾಫಿ, ಟೀ ಅತಿಯಾದ ಅಭ್ಯಾಸ ಆರೋಗ್ಯಕ್ಕೆ ಹಾನಿಕರ ಎಂದು ಇಷ್ಟು ದಿನ ಕೇಳಿದ್ದವರಿಗೆ ಚಹಾ ಸೇವನೆಯಿಂದ ಸೌಂದರ್ಯವೃದ್ಧಿಯಾಗುತ್ತದೆ,...
ಎವರ್ ಗ್ರೀನ್ ಟೀ
Updated on: 

ಕಾಫಿ, ಟೀ ಅತಿಯಾದ ಅಭ್ಯಾಸ ಆರೋಗ್ಯಕ್ಕೆ ಹಾನಿಕರ ಎಂದು ಇಷ್ಟು ದಿನ ಕೇಳಿದ್ದವರಿಗೆ ಚಹಾ ಸೇವನೆಯಿಂದ ಸೌಂದರ್ಯವೃದ್ಧಿಯಾಗುತ್ತದೆ, ಆರೋಗ್ಯ ವೃದ್ಧಿಸುತ್ತದೆ ಎಂದರೆ ಕುತೂಹಲದ ಜೊತೆಗೆ ಅಬ್ಬಾ ಇನ್ನಾದರೂ ಮನಸೋಇಚ್ಛೆ ತಮ್ಮ ಪ್ರೀತಿಯ ಪಾನೀಯ ಕುಡಿಯಬಹುದೆನ್ನುವ ನೆಮ್ಮದಿ. ಆದರೆ ಅದು ಗ್ರೀನ್ ಟೀ ಆಗಿದ್ದರೆ ಮಾತ್ರ ನಿಮ್ಮ ಸಂತಸ ಹಾಗೆಯೇ ಮುಂದುವರೆಯುತ್ತದೆ. ಮೊದಲ ಬಾರಿಗೆ ಸೇವಿಸಿದಾಗ ಕಸಿವಿಸಿಯಾದರೂ ಒಂದು ಬಾರಿ ಇದರ ಚಟಕ್ಕೆ ಅಂಟಿಕೊಂಡರೆ ನೀವೇ ಅದನ್ನು ದೈನಂದಿನ ಅಭ್ಯಾಸವಾಗಿ ರೂಢಿಸಿಕೊಂಡು ಬಿಡುತ್ತೀರಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಾಗಿರುವುದರಿಂದ ನಿಮ್ಮ ಶರೀರದಲ್ಲಿ ಕೆಫಿನ್ ಮತ್ತು ತಂಬಾಕಿನಿಂದ ಶೇಖರಣೆಯಾದ ವಿಷಕಾರಕಗಳನ್ನು ಹೊರಹಾಕುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ.

ದೇಹಕ್ಕೆ ಚೈತನ್ಯ
ಗ್ರೀನ್ ಟೀ ಅಭ್ಯಾಸವಿರುವವರು ಇಳಿವಯಸ್ಸಿನಲ್ಲೂ ಕೂಡ ಚಟುವಟಿಕೆಯಿಂದ ಇರಬಹುದು. ಇದರಲ್ಲಿರುವ ಇಜಿಸಿಜಿ ಆ್ಯಂಟಿಆಕ್ಸಿಡೆಂಟ್ಸ್ ದೇಹದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಕೊಲೆಸ್ಟರಾಲ್ ಹೆಚ್ಚಾಗದಂತೆ ತಡೆಯುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟುವ ಔಷಧೀಯ ಗುಣವನ್ನೂ ಹೊಂದಿದೆ. ಇದರಲ್ಲಿರುವ ವಿಟಮಿನ್ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ಮುಕ್ತಿಯನ್ನು ನೀಡುತ್ತದೆ. ಹಾಗೆಯೇ ನಿಮ್ಮ ದಿನನಿತ್ಯದ ಒತ್ತಡವನ್ನೂ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಗ್ರೀನ್ ಟೀ ಸೇವನೆಯಿಂದ ಮನುಷ್ಯನ ಸ್ಮರಣಶಕ್ತಿ ಹೆಚ್ಚುತ್ತದೆ ಎನ್ನುವುದು ವಿಜ್ಞಾನಿಗಳ ಹೇಳಿಕೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿರುವುದರಿಂದ ಮೊಡವೆ, ಸುಕ್ಕುಗಳೂ ನಿಮ್ಮಿಂದ ದೂರವಾಗುತ್ತವೆ.

ಸೌಂದರ್ಯ ವೃದ್ಧಿ

  • ಚಹಾದ ಕಷಾಯಕ್ಕೆ ಸಕ್ಕರೆ ಹಾಕದೆ ಮುಖಕ್ಕೆ ಹಚ್ಚಿ ಹತ್ತು ನಿಮಿಷಗಳ ನಂತರ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
  • ಬಿಸಿಲಿನಿಂದ ಟ್ಯಾನ್ ಆದ ಚರ್ಮಕ್ಕೆ, ಕಣ್ಣುಗಳ ಸುತ್ತ ಇರುವ ಕಪ್ಪು ವರ್ತುಲಕ್ಕೆ ಈ ಕಷಾಯವನ್ನು ಬಳಸಿದರೆ ದಿನ ಕಳೆದಂತೆ ಮಾಯವಾಗುತ್ತವೆ. ಗ್ರೀನ್ ಟೀ ಕಷಾಯವನ್ನು ಒಂದು ಲೀಟರ್ ನೀರಿಗೆ ಬೆರೆಸಿ ತಲೆ ಸ್ನಾನದ ಕೊನೆಯಲ್ಲಿ ಉಪಯೋಗಿಸಿದರೆ ತಲೆಹೊಟ್ಟು, ಕೂದಲುದುರುವುದು, ಕೂದಲು ಸೀಳಿವಿಕೆ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ಗಟ್ಟಿ ಮೊಸರಿಗೆ ಕಷಾಯವನ್ನು ಬೆರೆಸಿ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
  • ಕಷಾಯಕ್ಕೆ ಅಕ್ಕಿ ಹಿಟ್ಟು ಅಥವಾ ಕಡಲೆ ಹಿಟ್ಟು, ಜೇನು ತುಪ್ಪ ಬೆರೆಸಿ ತಯಾರಿಸಿದ ಪ್ಯಾಕ್‌ನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆದರೆ ಮೊಡವೆ, ಕಲೆ, ರಂಧ್ರಗಳ ಸಮಸ್ಯೆ ಮಾಯವಾಗುತ್ತದೆ.
  • ಕಷಾಯಕ್ಕೆ ಜೇನುತುಪ್ಪ, ಉಪ್ಪು, ಸಕ್ಕರೆ ಸೇರಿಸಿ ಅನಗತ್ಯ ಕೂದಲುಗಳ ಜಾಗಕ್ಕೆ ಉಜ್ಜುತ್ತಾ ಇದ್ದರೆ ಅಲ್ಲಿನ ಕೂದಲುಗಳ ಬೆಳವಣಿಗೆ ಕುಂಟಿತವಾಗುತ್ತದೆ.
ಸಣ್ಣವಾಗಲು ಸಹಾಯ
ಮುನ್ನೆಚ್ಚರಿಕೆ ಇರಲಿ
  • ಆಗಷ್ಟೇ ತಯಾರಿಸಿದ ಟೀ ಮಾತ್ರ ಕುಡಿಯಿರಿ. ತುಂಬಾ ಹೊತ್ತು ಬಿಟ್ಟು ಕುಡಿದರೆ ವಿಟಮಿನ್ ಮತ್ತು ಆ್ಯಂಟಿಆಕ್ಸಿಡಂಟ್ಸ್ ಕಡಿಮೆಯಾಗುತ್ತದೆ.
  •  ಊಟಕಿಂತ ಒಂದು ಗಂಟೆ ಮುಂಚೆ ಕುಡಿಯಬೇಕು.
  • ಬೇರೆ ಔಷಧಿಗಳ ಜೊತೆ ತೆಗೆದುಕೊಳ್ಳಬಾರದು.
  • ಸ್ಟ್ರಾಂಗ್ ಟೀಯಿಂದ ನಿದ್ರಾಹೀನತೆ ಮತ್ತು ಅಜೀರ್ಣ ಸಮಸ್ಯೆ ಉಂಟಾಗಬಹುದು.
  • ದಿನಕ್ಕೆ ಎರಡು ಅಥವಾ ಮೂರು ಕಪ್‌ಗಳ ಮಿತಿಯಿರಲಿ.
  • ಟೀ ಉತ್ಪಾದನಾ ದಿನಾಂಕದಿಂದ ಆರು ತಿಂಗಳೊಳಗೆ ಪೌಡರ್ ಬಳಸಿ.
ಅನುಕೂಲಗಳೇನು?
ಮಧುಮೇಹ

ಹೃದಯದ ಸಮಸ್ಯೆ

ಕ್ಯಾನ್ಸರ್
ಪಾರ್ಶ್ವವಾಯು
- ಜಮುನಾ ರಾಣಿ .ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com