ಆರೋಗ್ಯ-ಜೀವನಶೈಲಿ

ಆಮ್ಲ ಪಿತ್ತ

Published On :

ಸ್ವಲ್ಪ ಹುಳಿ ಪದಾರ್ಥವನ್ನು ತಿಂದ ಕೂಡಲೇ ತಲೆನೋವು. ವಾಮಿಟಿಂಗ್ ಸೆನ್ಷೇಷನ್. ಬೆಳಗಿನ ತಿಂಡಿ ತುಸು ತಿಂದ್ರೂ ಕಷ್ಟ. ಬಿಟ್ರಂತೂ ಮತ್ತೂ ಕಷ್ಟ. ಇದಕ್ಕೆ ಆಮ್ಲ ಪಿತ್ತವೇ ಕಾರಣ. ಈ ಸಮಸ್ಯೆಗಳ ಸುತ್ತ ಒಂದು ನೋಟ.

ಪ್ಲಾಬ್ಲಂಗೆ ಕಾರಣಗಳೇನು?
*    ಮಸಾಲೆ ಪದಾರ್ಥಗಳ ಅತಿಯಾದ ಸೇವನೆ.
*    ಜೀರ್ಣಿಸಲು ಕಷ್ಟವಾಗುವ ಆಹಾರ ಸೇವನೆ.
*    ಮದ್ಯಪಾನ ಮತ್ತು ತಂಬಾಕು ಸೇವನೆ.
*    ಅನಿಯಮಿತವಾಗಿ ಊಟ ಮಾಡುವುದು.
*    ಮಾನಸಿಕ ಒತ್ತಡ.
*    ಸಾಸಿವೆ ಎಣ್ಣೆ ಹಾಗೂ ಹುರುಳಿ ಸೇವನೆ.
*    ತಂಗಳು ಆಹಾರ ಸೇವನೆ.
*    ಚಾಟ್ಸ್, ಕೃತಕ ತಂಪು ಪಾನೀಯಗಳ ಬಳಕೆ.
*    ಖಾರ, ಹುಳಿ ಪದಾರ್ಥಗಳ ಅತಿಯಾದ ಸೇವನೆ.
*    ಅತಿಯಾಗಿ ಕಾಫಿ/ ಟೀ ಸೇವನೆ.

ಪಿತ್ತ ಲಕ್ಷಣಗಳೇನು?
*    ಹುಳಿ ತೇಗು
*    ಅಜೀರ್ಣ
*    ಹೊಟ್ಟೆನೋವು
*    ತಲೆನೋವು
*    ಹೊಟ್ಟೆ ಹಾಗೂ ತಲೆ ಉರಿ
*    ವಾಕರಿಕೆ
*    ಮಲಬದ್ಧತೆ
*    ತಲೆ ಸುತ್ತುವುದು

ಏನು ಮಾಡಬಹುದು?
*    ಭತ್ತದ ಅರಳನ್ನು ಸಕ್ಕರೆ ಮತ್ತು ಹಾಲು ಬೆರೆಸಿ ಸೇವಿಸುವುದು.
*    ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದು.
*    ಪುದೀನಾ ರಸಕ್ಕೆ ಸಮ ಪ್ರಮಾಣದ ಜೇನುತುಪ್ಪ ಸೇರಿಸಿ ತಿನ್ನುವುದು.
*    ಜೀರಿಗೆ ಕಷಾಯ ಕುಡಿಯುವುದು.
*    ಅಜವಾನ ಬೀಜವನ್ನು ನಿಂಬೆಯ ರಸದಲ್ಲಿ 24 ಗಂಟೆ ನೆನೆಸಿ ನಂತರ ಒಣಗಿಸಿ, ಅದರ ಪುಡಿಯನ್ನು ಸೇವಿಸಿದರೆ ಒಳ್ಳೆಯದು.
*    ಕೊತ್ತಂಬರಿ ಸೊಪ್ಪಿನ ರಸಕ್ಕೆ ಕಲ್ಲು ಸಕ್ಕರೆ ಅಥವಾ ಜೀರಿಗೆ ಸೇರಿಸಿ ಕುಡಿಯುವುದು.

ಏನು ಮಾಡಿದರೆ ಒಳಿತು?
ಬಾರ್ಲಿ, ಗೋದಿ ಅಥವಾ ಲಾಜ (ಬತ್ತದ ಅರಳು) ನೀರಿನ ಜತೆ ಸೇರಿಸಿ ಕುದಿಸಿ ಸಕ್ಕರೆ ಮತ್ತು ಜೇನಿನ ಜತೆ  ಸೇವಿಸುವುದು. ಹೆಸರುಕಾಳು, ಹೆಸರುಬೇಳೆ, ಪಡವಲಕಾಯಿ, ಸೌತೆಕಾಯಿ, ಗೋರಿಕಾರಿ, ಬಸಳೆಸೊಪ್ಪು, ಹೊನಗೊನೆಸೊಪ್ಪು.

ಏನನ್ನು ತ್ಯಜಿಸಬೇಕು?

ಉದ್ದು, ಹುರುಳಿ, ಹುಳಿ ಪದಾರ್ಥ, ಅತಿಯಾದ ಉಪ್ಪು, ಹುಳಿ, ಖಾರ, ಮಸಾಲೆ ಪದಾರ್ಥಗಳು, ಮದ್ಯಪಾನ,ಬೀಡಿ, ಸಿಗರೇಟು, ತಂಬಾಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.