

ಹೊಟ್ಟೆಯಲ್ಲಿನ ವಾಯುವಿಕೋಪ ಅಂಶಗಳು ಅನ್ನನಾಳದ ಮೂಲಕ ಅಪ್ರಯತ್ನಪೂರ್ವಕವಾಗಿ ವಾಂತಿ ರೂಪದಲ್ಲಿ ಹೊರಬರುವ ಸ್ಥಿತಿಯೇ 'ಗ್ಯಾಸ್ಟ್ರೋ ಈಸೋಫೇಗಲ್ ರಿಫ್ಲಕ್ಸ್ ಡಿಸಾರ್ಡರ್' (ಜಿಇಆರ್ಡಿ). ಇದೊಂದು ಸಾಮಾನ್ಯ ಸಂಗತಿಯಾಗಿದ್ದು, ದಿನದಲ್ಲಿ ಹಲವು ಬಾರಿ ಮರುಕಳಿಸಬಹುದು.
ದೇಹದೊಳಗಿರುವ ನಿರೋಧಕ ಅಂಶಗಳಾದ ಆ್ಯಂಟಿ ರಿಫ್ಲಕ್ಸ್ ಬ್ಯಾರಿಯರ್ ಮೂಲಕ ಉಮ್ಮಳಿಕೆಯು ನಿಯಂತ್ರಿತವಾಗಿರುತ್ತದೆ. ಈ ಅಂಶಗಳು ಕ್ಷಣಿಕ ಸಡಿಲಿಕೆಯನ್ನು ಹೊರತುಪಡಿಸಿ ಯಾವಾಗಲೂ ಸಂಕೋಚನ ಸ್ಥಿತಿಯಲ್ಲಿರುವ ಸ್ವಾಭಾವಿಕ ಅಂಗರಚನೆಯ ಭಾಗಗಳಾದ ಕೆಳ ಈಸೋಫೇಗಲ್ ಸಂಪೀಡಕ ಸ್ನಾಯುವನ್ನು ಒಳಗೊಂಡಿರುತ್ತವೆ. ವ್ಯಕ್ತಿಯೊಬ್ಬ ಆಹಾರ- ನೀರನ್ನು ತೆಗೆದುಕೊಂಡಾಗ ಇದು ತೆರೆದುಕೊಳ್ಳುತ್ತದೆ. ಆಗ ವಪೆಯಲ್ಲಿ ಪಿಂಚ್ಕಾರ್ಕ್ ಕ್ರಿಯೆ ಉಂಟಾಗಿ, ಕಿಬ್ಬೊಟ್ಟೆಯಲ್ಲಿ ಸುಮಾರು 1 ಸೆಂ.ಮೀ. ಈಸೋಫೇಗಸ್ ಒಳಗೊಂಡ ಫ್ರಿನೋಈಸೋಫೇಗಲ್ ಲಿಗಮೆಂಟ್ ಹೊಟ್ಟೆಯೊಳಗೆ ಸುತ್ತಿ ಬಳಸಿ ಪ್ರವೇಶಿಸುತ್ತದೆ. ಇದೇ ರೀತಿ ಹಿಯಾಟಸ್ ಹರ್ನಿಯಾ ಕೇಸಿನಲ್ಲಿ ಕಿಬ್ಬೊಟ್ಟೆಯಲ್ಲಿರುವ ಈಸೋಫೇಗಸ್ ಭಾಗದ ಬದಲಾಗಿ ಎದೆಯೊಳಗೆ ಒತ್ತಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಹೈಪೊಟೆನ್ಸಿವ್ ಎಲ್ಇಎಸ್ ಅಥವಾ ಹೆಚ್ಚಿನ ಪ್ರಮಾಣದ ಎಲ್ಇಎಸ್ ಟ್ರಾನ್ಸಿಯಂಟ್ ರಿಲಾಕ್ಸೇಷನ್ ಸಂಭವಿಸಬಹುದು. ಆಗಲೂ ನಮ್ಮ ದೇಹ ವ್ಯವಸ್ಥೆಯು ಅನ್ನನಾಳದ ಚಲನೆಯಿಂದ ಆಮ್ಲವನ್ನು ತೆರವುಗೊಳಿಸುತ್ತದೆ. ಹಾಗೂ ಈಸೋಫೇಗಲ್ ಸಬ್ ಮ್ಯೂಕೋಸಲ್ ಗ್ರಂಥಿಗಳಿಂದ ಬೈಕಾರ್ಬೋನೇಟ್ ಸ್ರವಿಸಿ ಲಾವಾರಸದ ಮೂಲಕ ಆಮ್ಲವು ಸ್ಥಿರೀಕರಣಗೊಳ್ಳುತ್ತದೆ. ಒಂದು ವೇಳೆ ಈ ತಡೆಯೂ ವಿಫಲವಾದಲ್ಲಿ ಟಿಶ್ಯೂ ರೆಸಿಸ್ಟೆನ್ಸ್ ಕೂಡ ಸಹಾಯ ಮಾಡುತ್ತದೆ. ಇಂಥ ತಡೆಗಳಿಂದ ಜಿಇಆರ್ಡಿ ಕಾಣಿಸಿಕೊಳ್ಳುತ್ತದೆ.
ಕಾರಣಗಳು ಅನೇಕ...