ಕೆಲವರು ಆರೋಗ್ಯದಲ್ಲಿ ತುಸು ಏರುಪೇರಾದರೂ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಅದ್ರಲ್ಲೂ ಮಕ್ಕಳಿಗೆ ಏನಾದರೂ ಆದರಂತೂ ಆಕಾಶ ತಲೆ ಮೇಲೆ ಬಿದ್ದವರಂತೆ ಆಡುತ್ತಾರೆ. ಹಾಗಾದರೆ ವೈದ್ಯರನ್ನು ಯಾವಾಗ ಭೇಟಿಯಾಗಬೇಕು?
ನಿತ್ಯ ಕೆಮ್ಮು, ನೆಗಡಿಯಂಥ ಆರೋಗ್ಯ ಸಮಸ್ಯೆಗಳು ಬೆಂಬಿಡದೇ ಕಾಡುತ್ತಿದ್ದರೆ
ಸಕ್ಕರೆ ಕಾಯಿಲೆ, ಬಿಪಿ ಇದ್ದರೆ
ಗರ್ಭಿಣಿಯರ ಹಾಗೂ ಮಕ್ಕಳ ನಿಯಮಿತ ಆರೋಗ್ಯ ತಪಾಸಣೆಗೆ
ಆರೋಗ್ಯ ತಪಾಸಣೆ, ಆರೋಗ್ಯ ವಿಷಯ ಮಾಹಿತಿ ಪಡೆಯಲು
ರೋಗ ಪ್ರತಿಬಂಧನೆಗೆ ಸಲಹೆಗಾಗಿ
ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು
ಅಪಘಾತದಿಂದ ಉಂಟಾದ ಗಾಯಕ್ಕೆ ಚಿಕಿತ್ಸೆ ಪಡೆಯಲು
ಜ್ಞಾನ ತಪ್ಪಿದಾಗ ಪ್ರಥಮ ಚಿಕಿತ್ಸೆ ಹಾಗೂ ಸಂಪೂರ್ಣ ಚಿಕಿತ್ಸೆಗೆ
ಅನಾರೋಗ್ಯ, ತುರ್ತುಪರಿಸ್ಥಿತಿಯಲ್ಲಿ ಪ್ರಥಮ ಹಾಗೂ ಅಗತ್ಯ ಚಿಕಿತ್ಸೆಗೆ