ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
Updated on: 

ನಮ್ಮೆಲ್ಲರಲ್ಲೂ ಒಂದಲ್ಲ ಒಂದು ಕೊರತೆ ಇರುತ್ತದೆ. ಅದು ದೈಹಿಕವಾಗಿಯಾದರೂ ಸರಿ, ಸಾಮಾಜಿಕ ಸ್ಕಿಲ್‌ಗಳಾದರೂ ಸರಿ, ನಾವು ಬಯಸಿದಂತೆಯೇ ನಮ್ಮದೆಲ್ಲವೂ ಇರುವುದಿಲ್ಲ. ಹಾಗೆಂದು ಅದೇ ನಮ್ಮಲ್ಲಿ ಕೀಳರಿಮೆ ಹುಟ್ಟಿಸಿ ಬೇರೆ ಅವಕಾಶಗಳಿಂದ ವಂಚಿಸುವಂತಾಗಬಾರದು.

  • ಮೊದಲು ನಿಮ್ಮಲ್ಲಿರುವ ಪ್ರತಿಭೆ ಮತ್ತು ಒಳ್ಳೆಯ ಅಂಶಗಳನ್ನು ಗುರುತಿಸಿಕೊಳ್ಳಿ. ಎಷ್ಟೇ ಕೀಳರಿಮೆ ಕಾಡಿದಾಗಲೂ ಇವುಗಳನ್ನು ನೆನೆದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಈ ಬಗ್ಗೆ ಒಂದು ಲಿಸ್ಟ್ ತಯಾರಿಸಿ. ಕೀಳರಿಮೆ ಕಾಡಿದಾಗೆಲ್ಲ ಲಿಸ್ಟ್ ಮೇಲೆ ಕಣ್ಣಾಡಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ತಕ್ಷಣಕ್ಕೆ ಹೆಚ್ಚಿಸುತ್ತದೆ.
  •  ಹಿಂದೆ ನಿಮ್ಮನ್ನು ಯಾರಾದರೂ ಒಂದಲ್ಲ ಒಂದು ವಿಷಯಕ್ಕೆ ಹೊಗಳಿರುತ್ತಾರೆ. ನಿಮ್ಮ ನಗು ಚೆನ್ನಾಗಿದೆ ಎಂದೋ, ದನಿ ಚೆನ್ನಾಗಿದೆ, ಮಾತನಾಡುವ ಶೈಲಿ, ಇನ್ನೊಬ್ಬರೊಂದಿಗೆ ಬೆರೆಯುವ ಶೈಲಿ ಚೆನ್ನಾಗಿದೆ ಅಂತಲೋ ಅಂದಿರುತ್ತಾರೆ. ಅದನ್ನು ಆಗಾಗ ನೆನೆಸಿಕೊಳ್ಳಿ.
  • ಬಾಹ್ಯ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಬೇಡ. ಅದು ನಿಮ್ಮ ಕೈಲಿಲ್ಲ. ಆದರೆ, ಆಂತರಿಕ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಮಾತ್ರ ನಿಮ್ಮದೇ ಕೈಲಿದೆ.
  • ಹೊಸ ಕಲಿಕೆಗೆ ಸಾಧ್ಯವಾದಷ್ಟು ತೆರೆದುಕೊಳ್ಳಿ. ಹೊರಗೆ ಓಡಾಡಿ. ಹೊಸ ಹೊಸ ಮಾಹಿತಿ ತಿಳಿದುಕೊಳ್ಳಿ. ಜ್ಞಾನ ಯಾವತ್ತೂ ನಮ್ಮ ಅತ್ಯಂತ ದೊಡ್ಡ ಸ್ವತ್ತು. ಹಾಗೂ ಅದು ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
  •  ನಿಮ್ಮ ವೀಕ್‌ನೆಸ್‌ಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬರ ಕೆಟ್ಟ ತೀರ್ಪುಗಳಿಗೆ ಕಿವುಡಾಗಿರಲು ಕಲಿಯಿರಿ.
  • ಒಂದಂತೂ ನೆನಪಿಡಿ. ಪ್ರತಿಯೊಬ್ಬರೂ ಆತ್ಮವಿಶ್ವಾಸದ ಕೊರತೆಯಿಂದ ಬಳಲಿರುತ್ತಾರೆ. ಆದರೆ, ಕೆಲವರು ಅದನ್ನು ಮುಚ್ಚಿಡುವುದರಲ್ಲಿ ಹೆಚ್ಚು ಜಾಣರಾಗಿರುತ್ತಾರಷ್ಟೇ.
- ಗೀತಾ ಕೆ.ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com