ಕ್ಯಾನ್ಸರ್ಗೊಂದು ಪಾಸಿಟಿವ್ ಆನ್ಸರ್

ಕ್ಯಾನ್ಸರ್ ಎಂದರೆ ಹಲವಾರು ರೋಗಗಳ ಗುಂಪು ಎನ್ನಬಹುದು.
ಈ ಕಾಯಿಲೆಯ ವೈಶಿಷ್ಟ್ಯತೆ
ಕೋಶಗಳು ಅಸಾಮಾನ್ಯವಾಗಿಬೆಳೆಯುವುದು
ಸನಿಹದಲ್ಲಿರುವ ಅಂಗಾಂಶಗಳನ್ನು ಮತ್ತು ದೂರದಲ್ಲಿರುವ ಅಂಗಗಳ ಮೇಲೆ ಅತಿಕ್ರಮಣ ಮಾಡಬಲ್ಲ ಶಕ್ತಿ ಈ ಕೋಶಗಳಲ್ಲಿರುತ್ತದೆ. (ಉದಾಹರಣೆಗೆ ಹೊಟ್ಟೆಯ ಕ್ಯಾನ್ಸರ್ ಇದ್ದಾಗ ಅದು ಮೂಳೆ, ಶ್ವಾಸಕೋಶ, ಮೆದುಳಿಗೂ ಹಬ್ಬಬಲ್ಲುದು.)
ಚಿಕಿತ್ಸೆ ಪಡೆಯದಿದ್ದರೆ ಸಾವು ಖಚಿತ. ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಕಾಣಬಹುದು. ಹೆಚ್ಚಿನ ಕ್ಯಾನ್ಸರ್ಗಳನ್ನು ಮೊದಲೇ ಪತ್ತೆ ಮಾಡುವುದರಿಂದ ಗುಣಪಡಿಸಬಹುದಾಗಿದೆ. ಆದರೆ ರೋಗವು ತುಂಬಾ ಬೆಳೆದಿದ್ದರೆ ರೋಗ ವಾಸಿ ಮಾಡುವುದು ಕಷ್ಟವಾಗುತ್ತದೆ.
ಕ್ಯಾನ್ಸರ್ ಕಾರಣಗಳು
'ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ'.
ಶೇ.80 ರಷ್ಟು ಕ್ಯಾನ್ಸರ್ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್ಗಳಿಗೆ ತಂಬಾಕು ಬಳಕೆಯೇ ಕಾರಣ.
ಪ್ರಮುಖ ಕಾರಣಗಳು
ತಂಬಾಕು
ಮದ್ಯಪಾನ
ಆಹಾರಾಭ್ಯಾಸ
ಪ್ರಾಕೃತಿಕ ಅಂಶಗಳು
ವಂಶವಾಹಿನಿಯ ಅಂಶಗಳು
ತಂಬಾಕು:
ಕ್ಯಾನ್ಸರ್ನ ಏಕೈಕ ಅತಿ ಪ್ರಮುಖ ಕಾರಣ ಎಲ್ಲಾ ಬಗೆಯ ತಂಬಾಕುಕ್ಯಾನ್ಸರ್ಗೆ ಕಾರಣವಾಗುತ್ತದೆ.
ಧೂಮಪಾನ (ಸಿಗರೇಟ್, ಬೀಡಿ, ಚುಟ್ಟಾ, ಚಿಲ್ಲಮ್, ಹುಕ್ಕಾ ಇತ್ಯಾದಿ)
ಜಗಿಯುವುದು (ಪಾನ್, ಪಾನ್ ಮಸಾಲಾ, ಖೈನಿ, ಮಾವಾ ಇತ್ಯಾದಿ)
ಮದ್ಯಪಾನ
ತಂಬಾಕಿನ ಜೊತೆ ಸೇವಿಸಿದಾಗ ಇನ್ನಷ್ಟು ಅಪಾಯವನ್ನು ಹೆಚ್ಚಿಸುತ್ತದೆ.
ಕೇವಲ ಮದ್ಯಪಾನದಿಂದಲೇ ಸಿರೋಸಿಸ್ ಆಗಿ ನಂತರ ಅದು ಲಿವರ್ ಕ್ಯಾನ್ಸರ್ಗೆ ತಿರುಗಬಹುದು.
ಆಹಾರದ ಅಂಶಗಳು
ಈ ಬಗೆಯಲ್ಲಿ ಕ್ಯಾನ್ಸರ್ ಉಂಟು ಮಾಡುತ್ತವೆ.
ಹೆಚ್ಚಿನ ಕೊಬ್ಬಿರುವ ಅಂಶಗಳ ಸೇವನೆ-ಸ್ತನ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್
ಪ್ರಾಣಿಗಳ ಮಾಂಸದ ಅತಿಯಾದ ಸೇವನೆ-ಸ್ತನ, ಗರ್ಭಕೋಶ, ಕರುಳಿನ ಕ್ಯಾನ್ಸರ್
ಅತಿಯಾದ ಉಪ್ಪಿನಲ್ಲಿ ಅಥವಾ ಕರಿದ ಆಹಾರದ ಸೇವನೆ-ಉದರ ಮತ್ತು ಅನ್ನನಾಳದ ಕ್ಯಾನ್ಸರ್
ಆಹಾರದಲ್ಲಿ ಬೆರೆಸುವ ನೈಟ್ರೇಟ್ ಮತ್ತು ನೈಟ್ರೈಟ್ಗಳು (ಈಗ ಬಳಕೆಯಾಗುತ್ತಿಲ್ಲ) - ಕರುಳಿನ ಕ್ಯಾನ್ಸರ್
ಪ್ರಾಕೃತಿಕ ಅಂಶಗಳು
ವಿಕಿರಣಗಳಿಗೆ (ಮತ್ತು ಅಣುವಿಕಿರಣ ಸ್ಫೋಟಗಳಿಗೆ -ಹಿರೋಷಿಮ)ಒಡ್ಡಿಕೊಳ್ಳುವುದು
ಪವರ್ ಪ್ಲ್ಯಾಂಟ್ಗಳಿಂದ ಸೋರುವಿಕೆ (ಚೆರ್ನೋಬಿಲ್, ಭೋಪಾಲ್), ಅಪಾರವಾದ ರೇಡಿಯೇಷನ್ (ವಿಕಿರಣ, ಕ್ಷಕಿರಣ)ಗಳಿಗೆ ಒಡ್ಡಿಕೊಳ್ಳುವುದು
ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ಗೆಕಾರಣವಾಗಬಹುದು
ಪ್ರಕೃತಿ ಮಾಲಿನ್ಯ
ವೈರಲ್ ಸೋಂಕುಗಳು-ಗರ್ಭಕೋಶದ ಕ್ಯಾನ್ಸರ್ (ಸರ್ವಿಕ್ಸ್ ಕ್ಯಾನ್ಸರ್), ಲಿವರ್ ಕ್ಯಾನ್ಸರ್, ಕೆಲವು ಬ್ಲಡ್(ರಕ್ತದ)ಕ್ಯಾನ್ಸರ್ಗಳು, ಏಡ್ಸ್ ರೋಗಿಗಳಲ್ಲಿಯೂ ಕ್ಯಾನ್ಸರ್ ಅತಿ ಸಾಮಾನ್ಯ
ಜೀನ್ (ವಂಶವಾಹಿನಿಯ) ಅಂಶಗಳು
ಕೆಲವು ಕ್ಯಾನ್ಸರ್ಗಳು ಸಾಮಾನ್ಯವಾದ ವಂಶವಾಹಿನಿಗಳಿಂದ ಕುಟುಂಬಗಳಲ್ಲಿ ಕ್ಯಾನ್ಸರ್ ಉಂಟು ಮಾಡುತ್ತವೆ.
ಬ್ರೆಸ್ಟ್, ಕೊಲಾನ್ (ಕರುಳು), ಓವರಿ (ಅಂಡಾಶಯ) ಮತ್ತಿತರ ಕ್ಯಾನ್ಸರ್ಗಳು ಕುಟುಂಬಗಳಲ್ಲಿ ಯಾರಿಗಾದರೂ ಇದ್ದಾಗ ಕ್ಯಾನ್ಸರ್ ಕಾಣಿಸುವ ಅಪಾಯವಿರುತ್ತದೆ.
ಇವೆಲ್ಲವೂ ಈ ಕ್ಯಾನ್ಸರ್ಗಳನ್ನು ಉಂಟು ಮಾಡುತ್ತವೆ
ಬಾಯಿ ಅಥವಾ ಗಂಟಲಿನ ಕ್ಯಾನ್ಸರ್ (ನಾಲಿಗೆ, ಗಲ್ಲ, ಗದ್ದ ಇತ್ಯಾದಿ)
ಗಂಟಲು ಕ್ಯಾನ್ಸರ್
ಧ್ವನಿ ಪೆಟ್ಟಿಗೆಯ ಕ್ಯಾನ್ಸರ್
ಶ್ವಾಸಕೋಶದ ಕ್ಯಾನ್ಸರ್
ಅನ್ನನಾಳದ ಕ್ಯಾನ್ಸರ್
ಉದರದ ಕ್ಯಾನ್ಸರ್
ಕರುಳಿನ ಕ್ಯಾನ್ಸರ್
ಪ್ಯಾಂಕ್ರಿಯಾದ (ಮೇದೋಜೀರಕ) ಕ್ಯಾನ್ಸರ್
ಮೂತ್ರಚೀಲದ ಕ್ಯಾನ್ಸರ್
ಸೈನಸ್ಗಳ ಕ್ಯಾನ್ಸರ್
ಜೊತೆಗೆ ಇತರ ಅಪರೂಪದ ಕ್ಯಾನ್ಸರ್
ರಕ್ಷಣಾತ್ಮಕ ಅಂಶಗಳು
ಕೆಲವು ಅಂಶಗಳು ಕ್ಯಾನ್ಸರಿನ ವಿರುದ್ಧರಕ್ಷಿಸುತ್ತವೆ.
ಹಣ್ಣುಗಳನ್ನು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು
ನಾರಿನಂಶವನ್ನು ಹೆಚ್ಚು ಸೇವಿಸುವುದು
1. ಕರುಳಿನ ಕ್ಯಾನ್ಸರ್
ದೊಡ್ಡ ಕರುಳಿನ ಕ್ಯಾನ್ಸರ್ ಜೀರ್ಣಾಂಗ ವ್ಯವಸ್ಥೆಯ ಕೊನೆಯ ಭಾಗವನ್ನು ಕಾಡುತ್ತದೆ. ರೆಕ್ಟಲ್ (ಗುದಭಾಗ) ಕ್ಯಾನ್ಸರ್ ಎನ್ನುವುದು ಕೊನೆಯ ಆರು ಇಂಚಿನ ಕ್ಯಾನ್ಸರ್.
ಗಂಟುಗಳ ಹಾಗೆ ಮೊದಲು ಕಾಣಿಸಿಕೊಂಡು ಕ್ರಮೇಣ ಕರುಳಿನ ಭಾಗದಲ್ಲಿ ಕ್ಯಾನ್ಸರ್ ಆಗಿಬದಲಾಗುವುದು. ಅನೇಕರಿಗೆ ತಮ್ಮ ಮೊದಲ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳಿರುವುದಿಲ್ಲ. ಲಕ್ಷಣ ಕಂಡಾಗ ಅವು ಕ್ಯಾನ್ಸರ್ನ ಸೈಜ್ ಮತ್ತು ಯಾವ ಭಾಗದಲ್ಲಿವೆ ಎಂಬುದರ ಆಧಾರಿತವಾಗಿ ನಿರ್ಧರಿತವಾಗುತ್ತದೆ.
ಮಲಮೂತ್ರ ವಿಸರ್ಜನೆಯಲ್ಲಿ ಬದಲಾವಣೆ- ಕೆಲವು ವಾರಗಳವರೆಗೆ ಬೇಧಿ, ನಂತರ ಮಲಬದ್ಧತೆ ಕಾಡುತ್ತದೆ. ಅಥವಾ ಹಲವಾರು ವಾರಗಳ ಕಾಲ ಮಲವಿಸರ್ಜನೆಯಲ್ಲಿ ಬದಲಾವಣೆ ಕಾಣುತ್ತದೆ.
ಸದಾ ಕಾಲ ಕಾಡುವ ಹೊಟ್ಟೆನೋವು-ಹೊಟ್ಟೆ ಹಿಂಡಿದಂತೆ, ಗ್ಯಾಸ್ ತುಂಬಿದಂತೆ ನೋವು. ಹೊಟ್ಟೆನೋವು-ಹೊಟ್ಟೆತೊಳಸಿದಂತೆ, ಪೂರ್ತಿಯಾಗಿ ಖಾಲಿಯಾಗದಂತ ಭಾವನೆ ಸುಸ್ತು, ದಣಿವು, ನಿತ್ರಾಣ, ಕಾರಣವಿಲ್ಲದೇ ತೂಕದಲ್ಲಿ ಇಳಿತ.
2. ಲ್ಯುಕಿಮಿಯಾ-ಬ್ಲಡ್ ಕ್ಯಾನ್ಸರ್ ರೋಗಚಿಹ್ನೆ
ಈ ರೋಗ ಚಿಹ್ನೆಗಳು 'ಫ್ಲ್ಯೂ'(ಜ್ವರ, ನೆಗಡಿ, ಮೈಕೈನೋವು) ಅಥವಾ ಇತರೆ ಸಾಮಾನ್ಯ ಕಾಯಿಲೆಗಳನ್ನುಹೋಲಬಹುದು.
ಜ್ವರ
ತೂಕ ಇಳಿಕೆ
ಹಸಿವಿಲ್ಲದಿರುವುದು
ನಿತ್ರಾಣ, ದುರ್ಬಲತೆ, ಶಕ್ತಿ ಕಡಿಮೆಯಾದಂತನ್ನಿಸುವುದು
ಕ್ರಮೇಣ ರಕ್ತಕಣದ ತೊಂದರೆಗಳಅನುಗುಣವಾಗಿ ರೋಗಚಿಹ್ನೆಗಳು ಕಾಣುತ್ತವೆ.
ಅ)ಕೆಂಪು ರಕ್ತಕಣ:
ಈ ಕೋಶಗಳು ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೆ ಒಯ್ಯುತ್ತವೆ. ಕೆಂಪುರಕ್ತಕಣ ಕಡಿಮೆಯಾದರೆ ಉಸಿರಾಟದ ತೊಂದರೆ, ಸುಸ್ತು, ಪೇಲವ ಬಣ್ಣ ಕಾಣುತ್ತದೆ.
ಆ)ಬಿಳಿ ರಕ್ತಕಣ:
ಇವು ಸೈನಿಕರ ಹಾಗೆ ಕೀಟಾಣುಗಳನ್ನು ಕೊಲ್ಲುತ್ತವೆ. ಕಡಿಮೆಯಾದರೆ ಪದೇಪದೇ ಸೋಂಕು ತಗಲುತ್ತದೆ.
ಇ)ಪ್ಲೇಟ್ಲೆಟ್ಗಳು:
ರಕ್ತಸ್ರಾವ ತಡೆಯುವುದು ಇವುಗಳ ಕೆಲಸ, ಕಡಿಮೆಯಾದಾಗ ಸುಲಭವಾಗಿ ರಕ್ತಸ್ರಾವವಾಗುವುದು, ಮೂಗಿನಿಂದ ವಸಡುಗಳಿಂದ ತೀವ್ರವಾಗಿ ರಕ್ತ ಸೋರುವುದು ಮತ್ತು ಚರ್ಮದ ಮೇಲೆ ಕೆಂಪು ಬೊಬ್ಬೆಗಳಂತಾಗುವುದು ಸಾಮಾನ್ಯ.
ಕೆಲವು ಮುಖ್ಯ ಚಿಹ್ನೆಗಳು
ಕತ್ತಿನಲ್ಲಿರುವ ಗ್ರಂಥಿ (ಲಿಂಫ್ ನೋಡ್)ಗಳಲ್ಲಿ ನೋವಿಲ್ಲದ ಊತ, ಕಂಕುಳಲ್ಲಿ, ಹೊಟ್ಟೆಯಲ್ಲಿ ಗ್ರಂಥಿಯ ಊತ, ಮೂಳೆಯಲ್ಲಿ ನೋವು, ಕೀಲುಗಳಲ್ಲಿ ನೋವು, ಎದೆಯ ಮೂಳೆಯಲ್ಲಿ ನೋವು, ಮೆದುಳಿಗೂ ಹಬ್ಬಿದರೆ-ತಲೆ ನೋವು, ದುರ್ಬಲತೆ, ಮೂರ್ಛೆ, ವಾಂತಿ, ತಲೆ ಸುತ್ತುವುದು, ಕಣ್ಣುಮಬ್ಬಾಗುವುದು.
ಏನದು ಮಾರ್ಫಿನ್?
1987ರಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಮಾರ್ಷಿನ್ ಔಷಧ (ದ್ರವರೂಪ) ಬಳಕೆ ಪ್ರಾರಂಭಿಸಿದ್ದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ದೇಶದ ಎಲ್ಲಾ ಭಾಗಗಳಲ್ಲಿ ಈ ಔಷಧ ಲಭ್ಯವಾದಾಗ ಮಾತ್ರ ಕ್ಯಾನ್ಸರ್ ನೋವನ್ನು ನಿವಾರಿಸಿ ಅಂತಿಮ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಸಹಾಯಕ. ಮಾರ್ಫಿನ್ ಔಷಧವು ವಿವಿಧ ಬಗೆಗಳಲ್ಲಿ ಲಭ್ಯ, ಕ್ಯಾನ್ಸರ್ ನೋವು ನಿವಾರಣೆಗೆ ಮಾತ್ರೆ ಇಲ್ಲವೇ ದ್ರವರೂಪದ ಔಷಧ ಹೆಚ್ಚು ಉಪಯುಕ್ತ.
ಬಳಕೆ: ರೋಗಿಯು ಬದುಕಿರುವಷ್ಟು ದಿವಸ ವೈದ್ಯರ ಇಲ್ಲವೇ ಶುಶ್ರೂಷಕಿಯರ ಸಹಾಯವಿಲ್ಲದೆ ಬಾಯಿಯಲ್ಲಿ ಔಷಧ ತೆಗೆದುಕೊಳ್ಳಬಹುದು. ಮಾರ್ಫಿನ್ ಔಷಧದ ಬಗ್ಗೆ ಬಹಳ ಜನರಲ್ಲಿ ಅಪನಂಬಿಕೆಗಳಿವೆ. ಇದರಿಂದ ಯಾರಿಗೂ ಪ್ರಾಣಾಪಾಯವಿಲ್ಲ.
ಅಡ್ಡ ಪರಿಣಾಮಗಳು: ಮಲಗಟ್ಟುವಿಕೆ, ವಾಕರಿಕೆ, ಮೈಕಡಿತದ ತೊಂದರೆ ಕಾಣಬಹುದು. ಇದರ ಬಗ್ಗೆ ವೈದ್ಯರೇ ತಿಳಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಫೆಂಟನಿಲ್ ಎಂಬ ಅಫೀಮು ಔಷಧ ಪ್ಯಾಚ್ ರೂಪದಲ್ಲಿ ಲಭ್ಯ, ಇದನ್ನು 3 ದಿವಸಗಳಿಗೊಮ್ಮೆ ಬದಲಾಯಿಸಬೇಕು. ಮಾರ್ಫಿನ್ಗೆ ಹೋಲಿಸಿದರೆ ಫೆಂಟನಿಲ್ ತೆಗೆದುಕೊಂಡಾಗ ಇತರೆ ತೊಂದರೆಗಳು ಕಡಿಮೆ.
ಈ ಪ್ಯಾಚ್ ಔಷಧ ತುಂಬಾ ದುಬಾರಿ. ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾರ್ಫಿನ್ ಔಷಧವೇ ಸೂಕ್ತ.
ಅಪಾಯಕಾರಿ ಚಿಹ್ನೆಗಳು
ಮಾಗದೇ ಇರುವ ಗಾಯ ಅಥವಾ ಊತ ಕಾರಣವಿರದೆ ತೂಕ ಇಳಿತ ಅಥವಾ ಹಸಿವಾಗದಿರದು
ಸ್ತನದಲ್ಲಿ ಗಂಟು ಅಥವಾ ಕಠಿಣವಾದ ಭಾಗ
ಗಂಟಲಿನಲ್ಲಿ ಆಗುವ ಧ್ವನಿ ಬದಲಾವಣೆ ಅಥವಾ ಪದೇಪದೇ ಕಿರಿಕಿರಿ
ಸತತ ಕೆಮ್ಮು ಅಥವಾ ಕಫದಲ್ಲಿ ರಕ್ತ
ಯೋನಿಯಿಂದ ಸತತ ಸ್ರಾವ, ವಿಶೇಷವಾಗಿ ರಕ್ತ ಅಥವಾ ಕೆಟ್ಟವಾಸನೆ
ಸದಾ ಬದಲಾಗುತ್ತಾ ಇರುವ ಜೀರ್ಣಾಂಗ ಮತ್ತು ಮಲ ಹೋಗುವುದರಲ್ಲಿ ಆಗುವ ವ್ಯತ್ಯಾಸ (ಬೇಧಿ,ಮಲಬದ್ಧತೆ ಇತ್ಯಾದಿ)
ನುಂಗುವುದಕ್ಕೆ ಸತತವಾಗಿಕಷ್ಟವಾಗುವುದು.
-ಡಾ. ರಾಜಶೇಖರ ನಾಯಕ್ನಿರ್ದೇಶಕರು,
ನಾಯಕ್ಸ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಚ್ರೋಎಂಟರಾಲಜಿ-080-65351256
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


