ಸೆಕ್ಸ್ ಪರಿಮೆಂಟ್

ಮಾನವ ಎಂದ ಮೇಲೆ ಲೈಂಗಿಕ ಆಸಕ್ತಿ ಸಹಜ. ಆದರೆ ಇದರಿಂದ ಸಂಪೂರ್ಣ 'ತೃಪ್ತಿ'..
ಸೆಕ್ಸ್ ಪರಿಮೆಂಟ್
Updated on

ಮಾನವ ಎಂದ ಮೇಲೆ ಲೈಂಗಿಕ ಆಸಕ್ತಿ ಸಹಜ. ಆದರೆ ಇದರಿಂದ ಸಂಪೂರ್ಣ 'ತೃಪ್ತಿ' ಹೊಂದಲು ಸಾಧ್ಯವಾಗದ ಕೆಲವರು ವಿವಿಧ ಔಷಧಗಳ ಮೊರೆ ಹೋಗುತ್ತಾರೆ. ಆದರೆ ಇದರ ಬದಲು ನೈಸರ್ಗಿಕವಾಗಿಯೇ ಲೈಂಗಿಕ ತೃಪ್ತರಾಗಲು ಅತ್ಯಾಕರ್ಷಕ ಭಂಗಿಗಳು ಮತ್ತು ಕೆಲ ತಾಲೀಮುಗಳನ್ನು ಮಾಡುವುದು ಉತ್ತಮ. ಉತ್ತಮ ಆರೋಗ್ಯಕ್ಕಷ್ಟೇ ಈ ವ್ಯಾಯಾಮ ಮುಖ್ಯವಲ್ಲ. ಲೈಂಗಿಕ ತೃಪ್ತಿಗೂ ಅಗತ್ಯ. ಇದು ಮನುಷ್ಯನಿಗೆ ಪ್ರಚೋದನಾ ಶಕ್ತಿ ನೀಡುವುದಲ್ಲದೆ ನರಗಳ ಬಲವನ್ನು ಇಮ್ಮಡಿಗೊಳ್ಳುತ್ತದೆ. ಆಸಕ್ತಿಯನ್ನೂ ವೃದ್ಧಿಸುತ್ತದೆ. ಹಾಗಾದರೆ ಅಂಥ ತಾಲೀಮುಗಳು ಯಾವುವು? ಅವುಗಳನ್ನು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲಿ...

ಬೆತ್ತಲೆ ಪಾಠ
ನಮ್ಮಲ್ಲಿದು ತುಸು ಕಷ್ಟ. ಆದರೆ, ಉಲ್ಲಾಸಿತ ಲೈಂಗಿಕ ಜೀವನಕ್ಕಾಗಿ ಇಂಥ ಬೆತ್ತಲೆ ಯೋಗ ಮಾಡುವುದು ಉತ್ತಮದಾಯಕ. ದೇಹ ಸಂಪೂರ್ಣ ಸಡಿಲಗೊಂಡು ಲೈಂಗಿಕ ಆಸಕ್ತಿ ವೃದ್ಧಿಯಾಗುತ್ತದೆ, ಮನಸ್ಸು 'ಉದ್ರೇಕ'ಗೊಳ್ಳುತ್ತದೆ. ಅದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಗಾಳಿ, ಬೆಳಕು ಬರುವಂಥ ಕೋಣೆಯಲ್ಲಿ ಇಬ್ಬರೂ ಬೆತ್ತಲೆಯಾಗಬೇಕು. ಜೊತೆ ಜೊತೆಗೆ ಸೂರ್ಯ ನಮಸ್ಕಾರ, ಪದ್ಮಾಸನ, ಕಟಿ ಚಕ್ರಾಸನ, ಅರ್ಧ ಚಂದ್ರಾಸನ ಮಾಡಬೇಕು. ನಂತರ ಇಬ್ಬರೂ ನೀರಿನಲ್ಲಿ ಮಿಂದೆದ್ದು ಜ್ಯೂಸ್- ಫ್ರೂಟ್ಸ್ ತಿನ್ನುತ್ತಿದ್ದರೆ ಲೈಂಗಿಕೋದ್ರೇಕ ತನ್ನಿಂತಾನೇ ಆಗುತ್ತದೆ.
ಸ್ಕಾಟ್ ಎಕ್ಸರ್‌ಸೈಜ್
ಇದೊಂದು ರೀತಿಯಲ್ಲಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತು ಮಾಡುವ ವರ್ಕೌಟ್. ಪದ್ಮಾಸನದಂತೆ. ಬೆಳಗಿನ ಜಾವ ನಿಮ್ಮ ಸಂಗಾತಿಯೊಂದಿಗೆ ಇದನ್ನು ಮಾಡಿ. ಈ ಸ್ಕಾಟ್ ಎಕ್ಸರ್‌ಸೈಜ್‌ನಿಂದ ಇಬ್ಬರಿಗೂ ಒಳ್ಳೆಯದು ನಿಮ್ಮ ತೊಡೆ ಭಾಗ ಸಂಪೂರ್ಣವಾಗಿ ನೆಲ್ಲಕ್ಕೆ ತಾಗುವುದರಿಂದ ನಿಮ್ಮ ಖಾಸಗಿ ಭಾಗಗಳು ಹಾಗೂ ತೊಡೆಗಳ ಸ್ನಾಯುಗಳು ಬಲಗೊಳ್ಳುತ್ತವೆ.
ಪೋಲ್ ಡ್ಯಾನ್ಸ್
ಪೋಲ್ ಡ್ಯಾನ್ಸ್ ನೋಡೋದಕ್ಕೆ ಉದ್ರೇಕಕಾರಿಯಾಗಿರುತ್ತದೆ. ಅಷ್ಟು ಮಾತ್ರವಲ್ಲದೆ, ಇದು ಲೈಂಗಿಕ ಆಸಕ್ತಿ ವೃದ್ಧಿಸಲು ಸಹಕಾರಿ. ನೆಟ್ಟಿರುವ ಕಬ್ಬಿಣದ ಅಥವಾ ಮರದ ಕಂಬವನ್ನು ಹಿಡಿದುಕೊಂಡು ಅದನ್ನು ಸುತ್ತುವರಿದು ತುಂಡುಡುಗೆಯಲ್ಲಿ ನೃತ್ಯ ಮಾಡುತ್ತಿದ್ದರೆ ಎದುರಿಗಿರುವ ಸಂಗಾತಿಗೆ ಹೇಗಾಗಬೇಡ ಹೇಳಿ? ತನ್ನವನ ಅಥವಾ ತನ್ನವಳ ದೇಹಸಿರಿ ಹಾಗೂ ಹಾವಭಾವ ಕಂಡು ಕಾಮೋದ್ರೇಕದ ಮೀಟರ್ ನೆಗೆಯುತ್ತಿರುತ್ತೆ. ಇದರಿಂದ ನೃತ್ಯ ಮಾಡುವವನ/ಳ ಸ್ನಾಯುಗಳು, ಮಾಂಸ ಖಂಡಗಳೂ ಬಲಿಷ್ಠಗೊಳ್ಳುತ್ತವೆ. ನಂತರದ 'ಕಾರ್ಯ'ಕ್ಕೆ ಪೂರಕವಾಗಿ ಸ್ಪಂದಿಸಲೂ ನೆರವಾಗುತ್ತವೆ.
ಬೆಲ್ಲಿ ಡ್ಯಾನ್ಸ್
ಇದು ಹೊಟ್ಟೆ, ಸೊಂಟದ ವಿಷ್ಯ. ಇಲ್ಲಿ ಸೊಂಟದ ಕುಣಿತವೇ ಹೆಚ್ಚು. ಸಂಗಾತಿಯು ಏಕಾಂತದಲ್ಲಿ ತನ್ನವನ ಮುಂದೆ ಸೊಂಟ ಬಳುಕಿಸಿ ನೃತ್ಯ ಮಾಡಿದರೆ ಹೇಗೆ ಸುಮ್ಮನಿರಲು ಸಾಧ್ಯ? ದೇಹದ ಪ್ರತಿಯೊಂದು ಭಾಗವೂ ಉದ್ರೇಕಗೊಳ್ಳುತ್ತದೆ. ಅಪ್ಪುಗೆಗೆ ಮನ ತುಡಿಯುತ್ತದೆ. ಅಲ್ಲದೆ ಇದರಿಂದ ಮೊಣಕಾಲು, ಮೊಣಕೈ, ಕೀಲುಗಳು, ತೊಡೆಯ ಮೇಲ್ಭಾಗ, ಪೃಷ್ಠ, ಮೂತ್ರಪಿಂಡ, ಬೆನ್ನಿನ ಸ್ನಾಯುಗಳು ಸಡಿಲಗೊಳ್ಳುತ್ತವೆ.
ಪ್ರಣಯ ಪಾಠ
ಲೈಂಗಿಕ ತೃಪ್ತಿಗಾಗಿ ಸಂಗಾತಿಯೊಂದಿಗೆ ಪ್ರಣಯದ ಬಗ್ಗೆ ಮಾತನಾಡಬೇಕು. ನಿಮಗೆ ಉತ್ತಮ ನೃತ್ಯ ಮಾಡಲಾಗದಿದ್ದರೆ ಇದನ್ನಾದರೂ ಮಾಡಿ. ಇದರಿಂದ ಲೈಂಗಿಕ ಆಸಕ್ತಿ ಉದ್ರೇಕವಾಗುತ್ತದೆ. ಇಬ್ಬರೂ ಮಲಗುವ ಕೋಣೆಯಲ್ಲಿದ್ದು ಅನ್ಯ ಪ್ರಾಣಿ- ಪಕ್ಷಿಗಳ ಅಥವಾ ಇತರರ ಪ್ರಣಯದ ಬಗ್ಗೆ ಮಾತನಾಡಿದರೂ ಸಾಕು. ಲೈಂಗಿಕಾಸಕ್ತಿಗೆ ಮನೋದ್ರೇಕಗೊಳ್ಳುತ್ತದೆ.
ಜುಂಬಾ ನೃತ್ಯ
ಇದು ಸ್ಟ್ರಿಪ್ ಏರೋಬಿಕ್‌ನ ಒಂದು ಭಾಗ. ಈ ನೃತ್ಯ ಮುಖ್ಯವಾಗಿ ಮಾಂಸಖಂಡಗಳು, ಕೀಲುಗಳು ಮತ್ತು ಪೃಷ್ಠ, ಸ್ತನಗಳನ್ನು ಸಡಿಲಗೊಳಿಸಿಗೊಳಿಸಲು ಸಹಾಯಕ. ರಕ್ತ ಪರಿಚಲನೆ ಹೆಚ್ಚಿ ಸದೃಢಗೊಳ್ಳುತ್ತವೆ. ಅಧಿಕ ಮತ್ತು ಕಡಿಮೆ ಉಸಿರಾಟವನ್ನು ಮಾಡಿಸಬಲ್ಲ ನೃತ್ಯ ಇದಾಗಿದ್ದರಿಂದ ಪರಸ್ಪರ ಲೈಂಗಿಕ ಭಾವನೆಗಳನ್ನು ಕೆರಳಿಸುತ್ತದೆ.


=  ವಿಜಿಎಂ
mathvg@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com