

ನೀವು ತುಂಬಾ ದಪ್ಪಗಿದ್ದೀರಾ? ತೂಕ ಕಡಿಮೆಗೊಳಿಸಲು ಇಲ್ಲದ ಸಾಹಸವನ್ನೆಲ್ಲ ಮಾಡುತ್ತಿದ್ದೀರಾ? ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿದು ನೋಡಿ. ತೂಕ ಇಳಿಸುವ ಚಮತ್ಕಾರದಿಂದಲೇ ಆಯುರ್ವೇದದಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಸೋರೆಯಲ್ಲಿ ನಾರಿನಂಶ ಹೆಚ್ಚಿದ್ದು, ಕ್ಯಾಲೋರಿ ಕಡಿಮೆ ಇರುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಕೂಡಾ ಇದು ಸಹಾಯಕವಾಗಿರುತ್ತದೆ. ನಿಂಬೆಯೊಂದಿಗೆ ಮಿಕ್ಸ್ ಮಾಡಿದರೆ ಮೂತ್ರಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.