

ಈರುಳ್ಳಿ
ಹಸಿ ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿರುತ್ತದೆ. ಅದು ಬಾಯಿ ಹುಣ್ಣನ್ನು ಪರಿಣಾಮಕಾರಿಯಾಗಿ ಗುಣಪಡಿಸುವಲ್ಲಿ ಸಹಕರಿಸುತ್ತದೆ.
ಕಿತ್ತಳೆ ಹಣ್ಣು
ಬಾಯಿ ಹುಣ್ಣಿಗೆ 'ಸಿ' ವಿಟಮಿನ್ ಕೊರತೆಯೇ ಮುಖ್ಯ ಕಾರಣ. ಇದರ ಸರಿಯಾದ ಪ್ರಮಾಣ ಸೇವನೆಯಿಂದ ಹುಣ್ಣನ್ನು ಗುಣಪಡಿಸಿಕೊಳ್ಳಬಹುದು. 'ಸಿ' ವಿಟಮಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹುಣ್ಣು ಸೇರಿದಂತೆ ಇನ್ನೂ ಅನೇಕ ಸೋಂಕುಗಳ ವಿರುದ್ಧವೂ ಹೋರಾಡುತ್ತದೆ. ಕಿತ್ತಳೆ ಹಣ್ಣು 'ಸಿ' ಮಿಟಮಿನ್‌ನ ಆಗರ. ಹಣ್ಣು ಅಥವಾ ಅದರ ಜ್ಯೂಸ್ ಬಾಯಿ ಹುಣ್ಣಿಗೆ ಔಷಧಿ.
ತುಳಸಿ
ಬಾಯಿ ಹುಣ್ಣಿನಿಂದ ನರಳುತ್ತಿರುವರು ದಿನಕ್ಕೆ ಎರಡರಿಂದ ಮೂರು ಬಾರಿ ತಾಜಾ ತುಳಸಿ ಎಲೆಗಳನ್ನು ಅಗೆಯಿರಿ. ತುಳಸಿ ಎಲೆಯಲ್ಲಿರುವ ತೈಲದ ಅಂಶ ನೋವನ್ನು ಕಡಿಮೆ ಮಾಡುತ್ತದೆ.
ಉಪ್ಪು ನೀರು
ದಿನಕ್ಕೆ ಹಲವು ಬಾರಿ ಬಿಸಿ ಅಥವಾ ತಣ್ಣನೆ ನೀರಿಗೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಬಹುದು. ಇದು ನೋವನ್ನು ಶಮನ ಮಾಡುತ್ತದೆ. ಬೆಚ್ಚನೆಯ ನೀರಿಗೆ ಸ್ಪಲ್ಪ ಉಪ್ಪು ಬೆರೆಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಔಷಧಿಯ ಗುಣ ಹೊಂದಿರುವ ಉಪ್ಪು ಹುಣ್ಣನ್ನು ಬೇಗ ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ.
ತೆಂಗಿನ ಹಾಲು
ತಾಜಾ ತೆಂಗಿನ ಕಾಯಿ ಹಾಲು ಬಾಯಿ ಹುಣ್ಣಿಗೆ ಒಂದು ಅದ್ಭುತ ಮನೆ ಮದ್ದು. ತೆಂಗಿನ ಹಾಲಿನಿಂದ ದಿನಕ್ಕೆ ಮೂರು ನಾಲ್ಕು ಬಾರಿ ಬಾಯಿ ಮುಕ್ಕಳಿಸಿ.
ಪ್ರೋಬಯಾಟಿಕ್‌ಗಳು
ಪ್ರೋಬಯಾಟಿಕ್‌ಗಳು ನಮ್ಮ ದೇಹದಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತವೆ. ಬಾಯಿ ಹುಣ್ಣಿನ ನೋವಿನಿಂದ ಮುಕ್ತಿ ಪಡೆಯಲು ಮತ್ತು ಹುಣ್ಣನ್ನು ಗುಣಪಡಿಸಲು ಆಹಾರದೊಂದಿಗೆ ಮೊಸರು ಮತ್ತು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಿ.
ಸೋಡಿಯಂ ಬೃಕಾರ್ಬೋನೇಟ್
ಸೋಡಿಯಂ ಬೃಕಾರ್ಬೋನೇಟ್ ಬಾಯಿ ಹುಣ್ಣಿಗೆ ಒಂದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದರ ದ್ರಾವಣವನ್ನು ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಸೋಂಕಿನ ನೋವು ಮತ್ತು ಕಿರಿಕಿರಿಯಿಂದ ಬಿಡುಗಡೆ ಪಡೆಯಬಹುದು.
ಗಸಗಸೆ
ಇದು ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡುವ ಒಂದು ಆಯುರ್ವೇದೀಯ ವಿಧಾನ. ಗಸಗಸೆ ಮತ್ತು ಕಾಯಿಯನ್ನು ನುಣ್ಣಗೆ ರುಬ್ಬಿ, ಅದಕ್ಕೆ ಅಗತ್ಯವಿದ್ದಷ್ಟು ನೀರು ಮತ್ತು ಬೆಲ್ಲ ಹಾಕಿ ಕುದಿಸಿ ಕುಡಿಯಿರಿ.
ಪುದೀನಾ ಎಣ್ಣೆ
ಪುದೀನಾ ಎಣ್ಣೆಯನ್ನು ಹುಣ್ಣಿಗೆ ಹಚ್ಚುವ ಮೂಲಕ ಬಾಯಿ ಹುಣ್ಣಿನ ನೋವು ಮತ್ತು ಕಿರಿಕಿರಿಗೆ ಪರಿಹಾರ ಕಂಡುಕೊಳ್ಳಬಹುದು. ಇದು ಸಾಮಾನ್ಯವಾಗಿ ಎಲ್ಲ ಮೆಡಿಕಲ್ ಸ್ಟೋರ್‌ಗಳಲ್ಲೂ ಸಿಗುತ್ತದೆ.
ಜೇನು ತುಪ್ಪ ಮತ್ತು ಕಾಯಿ ಹಾಲು
ಜೇನು ತುಪ್ಪ ಮತ್ತು ಕಾಯಿ ಹಾಲಿನ ಮಿಶ್ರಣವನ್ನು ವಸಡಿಗೆ ಹಚ್ಚಿ ಮಸಾಜ್ ಮಾಡಬೇಕು.
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜವೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ನೀರಿನೊಂದಿಗೆ ಬಿಸಿ ಮಾಡಿ ಆ ನೀರನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಬಾಯಿ ಮುಕ್ಕಳಿಸಿ.
ಜೇನುತುಪ್ಪ ಮತ್ತು ನೆಲ್ಲಿ ಬೇರಿನ ತೊಗಟೆ
ಜೇನುತುಪ್ಪ ಮತ್ತು ನೆಲ್ಲಿಕಾಯಿಯನ್ನು ಹಲವು ಕಾಯಿಲೆಗಳಿಗೆ ಔೌಷಧಿಯಾಗಿ ಬಳಸಲಾಗುತ್ತದೆ. ಎರಡನ್ನೂ ಒಟ್ಟಾಗಿ ಬಾಯಿಹುಣ್ಣಿಗೆ ರಾಮಬಾಣವಾಗಿ ಕೆಲಸಮಾಡುತ್ತದೆ. ನೆಲ್ಲಿ ಮರದ ಬೇರಿನ ತೊಗಟೆಯನ್ನು ಪುಡಿ ಮಾಡಿ ಜೇನು ತುಪ್ಪದೊಂದಿಗೆ ಬೆರಸಿ ಬಾಯಿ ಹುಣ್ಣಿಗೆ ಹಚ್ಚಿ.
ಪೇಸ್ಟ್ ಮತ್ತು ಬೇಕಿಂಗ್ ಸೋಡಾ
ಎರಡನ್ನೂ ಸಮ ಪ್ರಮಾಣದಲ್ಲಿ ಬೆರೆಸಿ, ಹಚ್ಚಿ. ಆದರಿದು ಸ್ವಲ್ಪ ಉರಿಯನ್ನುಂಟು ಮಾಡುತ್ತದೆ. ಅದಕ್ಕೆ ನಂತರ ಅಲೋವೆರಾ ಜೆಲ್ ಬಳಸಿದರೆ ಒಳ್ಳೆಯದು.
= ರಶ್ಮಿ ಕಾರ್ಗಲ್