

ಬೆನ್ನು ಇದೆ ಎಂದ ಮೇಲೆ ನೋವು ಸಹಜ. ಹಾಗಂತ ಅನುಭವಿಸುತ್ತಾ ಕೂರಬೇಕಿಲ್ಲ. ಬೆನ್ನು ನೋವಿನಿಂದ ಮುಕ್ತಿ ಹೊಂದಬೇಕು ಎಂದರೆ ವ್ಯವಸ್ಥಿತ ಆಹಾರ ಸೇವನೆ, ವ್ಯಾಯಾಮ ಅಗತ್ಯವಾಗಿ ಮಾಡಲೇಬೇಕು.
= ವಿಟಮಿನ್ 'ಡಿ' ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಇದರ ಕೊರತೆಯಾದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅಣಬೆ, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ 'ಡಿ' ಹೆಚ್ಚಿರುತ್ತದೆ.
= ಒಳ್ಳೆಯ ಸಂಗೀತ ಒತ್ತಡ ನಿವಾರಣೆಗೆ ಸಹಕಾರಿ. ಒತ್ತಡ ಕಡಿಮೆಯಾದಂತೆ ಬೆನ್ನು ನೋವು ಕಡಿಮೆಯಾಗುವುದು.
= ಬೆನ್ನು ನೋವು ನಿವಾರಣೆಗೆ ಪ್ರಾಣಾಯಾಮ ಬಹು ಪರಿಣಾಮಕಾರಿ. ಮಾನಸಿಕ ಒತ್ತಡ ನಿವಾರಣೆಗೂ ಇದೇ ಮಾರ್ಗ.
= ಆಗಾಗ್ಗೆ ಮಸಾಜ್ ಥೆರಪಿ ಮಾಡಿಸಿಕೊಂಡರೆ ಉತ್ತಮ. ಇದರಿಂದ ಸ್ನಾಯುಗಳೆಲ್ಲ ಸಡಿಲವಾಗಿ ಚಟುವಟಿಕೆಯಿಂದಿರಲು ಸಾಧ್ಯ. ಮಸಾಜ್ ಮಾಡುವಾಗ ಬೆಳ್ಳುಳ್ಳಿ ಎಣ್ಣೆ ಬಳಸಿದರೆ ಪರಿಣಾಮಕಾರಿ.
= ಕ್ಯಾಲ್ಸಿಯಂ ಇರುವ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂಯುಕ್ತ ಆಹಾರ ಅಗತ್ಯ.
= ಬೆನ್ನು ನೇರವಾಗಿ ನಿಲ್ಲುವಂಥ ಕುರ್ಚಿಗಳನ್ನು ಬಳಸಿ. ಮಲಗಲು ಗಟ್ಟಿಯಾದ ಜಮಖಾನ ಅಥವಾ ಚಾಪೆ ಬಳಸಿದಲ್ಲಿ ಬೆನ್ನು ಗಟ್ಟಿಮುಟ್ಟಾಗಿದ್ದು ನೋವು ಬಾಧಿಸುವುದಿಲ್ಲ. ಧೂಮಪಾನವೂ ಬೆನ್ನು ನೋವಿಗೆ ಕಾರಣ. ಹೀಗಾಗಿ, ಸಿಗರೇಟು- ಬೀಡಿ ಬಿಟ್ಟುಬಿಡಿ.
= ಬೆಳ್ಳುಳ್ಳಿ, ಆಲೂಗಡ್ಡೆ, ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್ಗಳನ್ನು ಹೆಚ್ಚಾಗಿ ಬಳಸಬೇಕು. ಹೂಕೋಸು, ಎಲೆಕೋಸು, ಬಸಳೆ ಸೇವಿಸಿದರೆ ಒಳ್ಳೆಯದು. ಊಟದ ನಂತರ ಒಂದು ಬಾಳೆಹಣ್ಣು ಸೇವನೆ ರೂಢಿಸಿಕೊಳ್ಳಿ. ಕೊಬ್ಬು, ಖಾರಯುತ ಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ದೂರವಿರಿಸುವುದು ಉತ್ತಮ. ಮೊಸರು, ಸಿಹಿತಿಂಡಿ, ಸಕ್ಕರೆ, ಉಪ್ಪಿನಕಾಯಿ, ಟೀ- ಕಾಫಿ ಯಥೇಚ್ಚ ಸೇವನೆ ಬೇಡ.
= ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದಾದರೆ ನೇರ ಭಂಗಿಯಲ್ಲಿ ಕೂರುವುದು ಸೂಕ್ತ.
= ದೇಹದ ತೂಕ ಮಿತಿಯಲ್ಲಿರುವಂತೆ ನೋಡಿಕೊಳ್ಳಿ.
= ದಿನದಲ್ಲಿ ಅರ್ಧ ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು.
= ಡ್ರೈವಿಂಗ್ ಮಾಡುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಉತ್ತಮ.
= ಮಂಜು