

ಕೋಮಲವಾದ ಚರ್ಮಕ್ಕಾಗಿ ನಾವೆಲ್ಲ ಸರ್ಕಸ್ಸನ್ನೇ ಮಾಡುತ್ತಿದ್ದೇವೆ. ಆದರೆ, ತಿನ್ನುವ ಆಹಾರದಿಂದಲೇ ಚರ್ಮ ಕೋಮಲವಾಗುತ್ತದೆ ಎಂಬುದನ್ನೇ ಮರೆತುಬಿಡುತ್ತೇವೆ. ದುಬಾರಿ ಮತ್ತು ಪರಿಣಾಮ ಬೀರದ ಸೌಂದರ್ಯವರ್ಧಕನ್ನು ಬಳಸುತ್ತೇವೆ. ಆದರೂ ಏನೂ ಉಪಯೋಗವಾಗುವುದಿಲ್ಲ. ಸೂಕ್ತ ಆಹಾರ ಸೇವನೆಯೊಂದೇ, ಚರ್ಮದ ಕೋಮಲತೆಗೆ ಮಾರ್ಗ.
ದೊಣೆ ್ಣ ಮೆಣಸಿನಕಾಯಿ
ಇದರಿಂದ ಶೇ.100ರಷ್ಟು ವಿಟಮಿನ್ 'ಸಿ'ನ ಪೂರೈಕೆಯಾಗುತ್ತದೆ. ಹಾಗೆಯೇ ಡಯೆಟ್‌ನಲ್ಲಿನ ಸತ್ವ ಮತ್ತು ವಿಟಮಿನ್ 'ಬಿ'ಯನ್ನು ಒಳಗೊಂಡಿರುತ್ತದೆ. ಇದು ಚರ್ಮ ಸುಕ್ಕಾಗುವಿಕೆಯನ್ನು ತಪ್ಪಿಸಿ ಚರ್ಮದಲ್ಲಿ ರಕ್ತಚಲನೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಸತ್ವವು ನಿಮಗೆ ಕಡಿಮೆ ಕ್ಯಾಲೋರಿಯ ದೀರ್ಘ ಶಕ್ತಿ ನೀಡುವುದಲ್ಲದೆ, ಬಿರುಕು, ಸೀಳು ಇಲ್ಲದಿರುವ ಚರ್ಮವನ್ನು ದಯಪಾಲಿಸುತ್ತದೆ.
ಕಪ್ಪು ಚಾಕೊಲೆಟ್
ಚರ್ಮದ ಕಾಂತಿಗಾಗಿ ಕಪ್ಪು ಚಾಕೊಲೆಟ್ ಉತ್ತಮ. ವಿಶಿಷ್ಟ ಸತ್ವಗಳನ್ನು ಹೊಂದಿರುತ್ತದೆ. ಇದರಲ್ಲಿನ 'ಆ್ಯಂಟಿಆಕ್ಸಿಡೆಂಟ್ಸ್ ನಿಮ್ಮ ಚರ್ಮದಲ್ಲಿನ ಒರಟುತನವನ್ನು ನಾಶಗೊಳಿಸಿ, ಸೂರ್ಯನ ನೇರ ಕಿರಣಗಳಿಂದಾಗುವ ತೊಂದರೆಗಳಿಂದ ರಕ್ಷಿಸುತ್ತದೆ. ಹಾಗೆಯೇ ರಕ್ತಪರಿಚಲನೆಯನ್ನು ಹೆಚ್ಚಿಸುತ್ತಾ ಆರೋಗ್ಯದಾಯಕ ಚರ್ಮವನ್ನು ಹೊಂದುವಂತೆ ಮಾಡುತ್ತದೆ. ನಿತ್ಯ ಶೇ.80ರಷ್ಟು ಹಾಲು ಮತ್ತು ಸಕ್ಕರೆ ಮಿಶ್ರಿತ ಸಾಂಪ್ರದಾಯಿಕ ಚಾಕೊಲೆಟ್ ಬಾರ್ ಅನ್ನು ಸೇವಿಸಿ.
ವಿಟ'ಮೀನ್' ಸಾಲ್ಮೋನ್
ಅಗಲವಾದ ಬೆಳ್ಳಿ ಬಣ್ಣದ ಮೀನು (ಸಾಲ್ಮೋನ್) ಆಯಾಸ, ಆ್ಯಸಿಡಿಟಿ ಮತ್ತು ಕಾಂತಿ ಕುಂದುವಿಕೆಯ ವಿರುದ್ಧ ಹೋರಾಡಲು ಸೂಕ್ತ ಆಹಾರ. ಇದರಲ್ಲಿ ವಿಟಮಿನ್ 'ಡಿ' ಹೇರಳ. ಇದರಿಂದ ಹೃದಯ, ಮೂಳೆಗಳು, ಕರುಳಿನ ಭಾಗಗಳು ಮತ್ತು ಮೆದುಳು ಆರೋಗ್ಯದಾಯಕವಾಗಿರುತ್ತವೆ. ಚರ್ಮದ ತೊಂದರೆಗ ಮಾಯವಾಗುತ್ತವೆ. ಇದನ್ನು ಹೆಚ್ಚಾಗಿ ಸೇವಿಸಿದಷ್ಟು ತಲೆಯ ನೆತ್ತಿ ಚರ್ಮವನ್ನು ಕೋಮಲ, ಆರೋಗ್ಯದಾಯಕ ಕೂದಲನ್ನು ಪಡೆಯಬಹುದು.
'ಕೊಬ್ಬರಿ' ಕಾಂತಿ
ಇದು ಲೊರಿಕ್ ಆ್ಯಸಿಡ್ ಅನ್ನು ಹೊಂದಿದೆ. ವಿಟಮಿನ್ 'ಇ' ಇದರಲ್ಲಿ ಹೇರಳ. ಕೀಟಾಣು, ವೈರಸ್, ಚರ್ಮ ಉರಿಯುವಿಕೆಯಂಥ ಸಮಸ್ಯೆಗಳಿಂದ ದೂರವಿರಿಸುತ್ತದೆ. ಅಲ್ಲದೆ, ಚರ್ಮವನ್ನು ತೇವ, ಕೋಮಲವಾಗಿಸಿ ಸುಕ್ಕು ರಹಿತವಾಗಿರುವಂತೆ ಮಾಡುತ್ತದೆ.
ಭಲೆ! ಬಸಲೆ
ಈ ಸೊಪ್ಪಿನಲ್ಲಿ ವಿಟಮಿನ್ 'ಎ', 'ಸಿ' ಮತ್ತು 'ಇ' ಅಧಿಕವಾಗಿರುತ್ತದೆ. ಹಾಗಾಗಿ ಚರ್ಮದಲ್ಲಿನ ಹಲವು ತೊಂದರೆಗಳನ್ನು ಈ ಸೊಪ್ಪು ನಿವಾರಿಸುತ್ತದೆ.
ಬೀಜ, ಕಾಳುಗಳು
ಸೂರ್ಯಕಾಂತಿ, ಕುಂಬಳ ಮತ್ತು ಅಗಸೆ ಬೀಜಗಳ ಸೇವನೆ ಆರೋಗ್ಯದಾಯಕ ಚರ್ಮಕ್ಕೆ ನೆರವಾಗುತ್ತದೆ. ಇವುಗಳಲ್ಲಿ ವಿಟಮಿನ್ 'ಇ' ಇದ್ದು, ಪೊಟ್ಯಾಶಿಯಂ, ಮೆಗ್ನೀಶಿಯಂ, ಪ್ರೊಟೀನ್‌ಗಳು ಹೇರಳವಿರುತ್ತವೆ. ಇವು ಚರ್ಮ ಸುಕ್ಕಾಗುವುದನ್ನು ತಡೆಯುತ್ತವೆ. ಅಲ್ಲದೆ, ಚರ್ಮ ತೇವಾಂಶದಿಂದಿರಲು ನೆರವಾಗುತ್ತದೆ.
ಪರಂಗಿಯಿಂದ ರಂಗು
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ 'ಸಿ' ಮತ್ತು 'ಇ' ಹೇರಳ. ಕೊಬ್ಬಿನಂಶವಿರುವುದಿಲ್ಲ. ಇದರ ಸೇವನೆಯಿಂದ ತೂಕ ಕಡಿಮೆಯಾಗುವುದಲ್ಲದೆ, ಚರ್ಮದ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಕ್ಯಾರೆಟ್
ಇದರ ಸೇವನೆ ಕಣ್ಣುಗಳಿಗೆ ಮಾತ್ರವಲ್ಲದೆ ಚರ್ಮಕ್ಕೂ ಸಹಾಯಕ. ವಿಟಮಿನ್ 'ಎ' ಹೇರಳವಿದ್ದು, ಚರ್ಮದಲ್ಲಿನ ಸಣ್ಣ ಸಣ್ಣ ಜೀವಕೋಶಗಳನ್ನು ಸಂರಕ್ಷಿಸುತ್ತದೆ. ಚರ್ಮದ ಬಿರುಕುಗಳನ್ನು ಮುಚ್ಚುತ್ತದೆ. ಹಾಗಾಗಿ ನಿತ್ಯ ಅರ್ಧ ಕಪ್ ಕ್ಯಾರೆಟ್ ಜ್ಯೂಸ್ ಬಳಕೆ ಚರ್ಮದ ಆರೋಗ್ಯಕ್ಕೆ ಉತ್ತಮ.
= ಕುಸುಮಾ