ಏಳು ಮಾರಕ ರೋಗಗಳಿಗಾಗಿ ಒಂದೇ ಪರೀಕ್ಷೆ

ರೋಗನಿದಾನ ಕೇಂದ್ರಗಳ ಮುಂಚೂಣಿಯ ಬಹುರಾಷ್ಟ್ರೀಯ ಸರಣಿಯಾದ ಮೆಟ್ರೊಪೊಲಿಸ್ ಹೆಲ್ತ್ಕೇರ್ ಲಿಮಿಟೆಡ್ ಜ್ವರವನ್ನು ಉಂಟು ಮಾಡುವ ಏಳು ರೋಗಗಳಿಗಾಗಿ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಒಂದೇ ಪರೀಕ್ಷೆಯನ್ನು ಆರಂಭಿಸಿದೆ. ಮಲ್ಟಿಫ್ಲೆಕ್ಸ್ ಪಿಸಿಆರ್ ಪರೀಕ್ಷೆ ಜ್ವರವನ್ನು ಉಂಟು ಮಾಡುವ ಏಳು ಸಾಮಾನ್ಯ ರೋಗಗಳನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ, ಅಂದರೆ ಮಲೇರಿಯಾ, ಡೆಂಘೆ, ಟೈಪಾಯ್ಡ್, ಲೆಕ್ಟೋಸ್ಪೈರೋಸಿಸ್, ಚಿಕನ್ಗುನ್ಯ, ವೆಸ್ಟ್ ನೈಲ್ ಫಿವರ್ ಮತ್ತು ರಿಕೆಟ್ಸಿಯಾಗಳು ಇದರಲ್ಲಿ ಸೇರಿವೆ. ಇದರಿಂದ ಜನರಿಗೆ ಉಳಿತಾಯ ಮಾಡಿಕೊಡುವುದಲ್ಲದೆ ದಿನದಿನಕ್ಕೂ ಹೆಚ್ಚು ವೆಚ್ಚದ್ದಾಗುತ್ತಿರುವ ಆರೋಗ್ಯ ವ್ಯವಸ್ಥೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ.
ಸಂಪೂರ್ಣ ರಕ್ತದಿಂದ ಪ್ಯಾಥೋಜೆನ್ಗಳ ನ್ಯೂಕ್ಲಿಯಕ್ ಆಸಿಡ್ ತೆಗೆದು ಮಲ್ಟಿಪಲ್ ಪಿಸಿಆರ್ ಪರೀಕ್ಷೆಯನ್ನು ತಕ್ಷಣದಲ್ಲಿಯೇ ಮಾಡಲಾಗುತ್ತದೆ. ಶೇ.100ರಷ್ಟು ಸೂಕ್ಷ್ಮತೆ ಮತ್ತು ನಿದರ್ಿಷ್ಟತೆ ಹೊಂದಿರುವ ಈ ಪರೀಕ್ಷೆಯಿಂದ ಒಟ್ಟಾರೆ ರೋಗಗಳ ಪೈಕಿ ಶೇ. 80ರಷ್ಟು ಅಸ್ವಸ್ಥತೆ ನೀರಿನಿಂದ ಬರುವಲ್ಲಿ ರೋಗ ಪತ್ತೆಗೆ ಅನುಕೂಲವಾಗಲಿದೆ. ಭಾರತದಲ್ಲಿ ಡೆಂಘೆ, ಟೈಪಾಯ್ಡ್, ಮಲೇರಿಯಾ ಪ್ರಕರಣಗಳು ಸಾಮಾನ್ಯವಾಗಿದ್ದು ಇದಕ್ಕೆ ಅನೈರ್ಮಲ್ಯ ಮತ್ತು ಕಳಪೆ ಒಳಚರಂಡಿ ವ್ಯವಸ್ಥೆಗಳು ಕಾರಣವಾಗಿವೆ. ಈ ಪರೀಕ್ಷೆ ಹಣ ಮತ್ತು ಸಮಯವನ್ನು ಉಳಿತಾಯ ಮಾಡುವುದಲ್ಲದೆ ಚಿಕಿತ್ಸೆ ಆದಷ್ಟುಬೇಗ ಆರಂಭವಾಗಲು ನೆರವಾಗುತ್ತದೆ. ಇದರಿಂದ ಹೊರೆ ಕಡಿಮೆಯಾಗುವುದಲ್ಲದೆ ಸಂಭಾವ್ಯ ರೋಗಿಯ ಮೇಲಿನ ಆಘಾತವು ಕಡಿಮೆಯಾಗುತ್ತದೆ.
ಈ ಸಂದರ್ಭದಲ್ಲಿ ಮೆಟ್ರೊಪೊಲಿಸ್ ಹೆಲ್ತ್ಕೇರ್ ಲಿಮಿಟೆಡ್ನ ಪಶ್ಚಿಮ ಭಾರತದ ವೈಜ್ಞಾನಿಕ ಸೇವೆ ಮತ್ತು ಕಾರ್ಯಾಚರಣೆ ಸಮೂಹ ಅಧ್ಯಕ್ಷರು ಮತ್ತು ಎಸ್ಬಿಯು ಮುಖ್ಯಸ್ಥರಾದ ಡಾ|| ನಿಲೇಶ್ ಶಾ ಅವರು ಮಾತನಾಡಿ, ಸೋಂಕು ರೋಗಗಳನ್ನು ಇಲ್ಲವಾಗಿಸುವ ನಮ್ಮ ಪ್ರಯತ್ನಕ್ಕೆ ಇಂದು ಹೆಚ್ಚಿನ ಚಾಲನೆ ಲಭಿಸಿದ್ದು ರೋಗನಿದಾನದಲ್ಲಿ ನಾವು ಪ್ರಮುಖ ಮೈಲುಗಲ್ಲನ್ನು ಸಾಧಿಸಿದ್ದೇವೆ. ಇದರಿಂದ ಸಮಯ ಮತ್ತು ಜೀವಗಳನ್ನು ಉಳಿಸಲು ಆರೋಗ್ಯ ಶುಶ್ರೂಷೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಎಲ್ಲಾ ಲಭ್ಯವಿರುವ ಸಾಂಪ್ರದಾಯಿಕ ಪರೀಕ್ಷೆಗಳಿಗೆ ಹೋಲಿಸಿದರೆ ಈ ಪರೀಕ್ಷೆ ಅತ್ಯಂತ ಶೀಘ್ರದಲ್ಲಿ ಪತ್ತೆ ಮಾಡುವುದರ ಖಾತ್ರಿ ನೀಡುತ್ತದೆ. ಜ್ವರದ ಮೊದಲ ದಿನದಂದೇ ರೋಗ ಪತ್ತೆಯಾಗಬಹುದಾಗಿದೆ. 2ನೇಯದಾಗಿ ಪರೀಕ್ಷೆ ತಪ್ಪಾಗಬಹುದಾಗಿರುವ ಸಾಂಪ್ರದಾಯಿಕ ತಪಾಸಣೆಗಳಿಂದ ಭಿನ್ನವಾಗಿ ದೃಢವಾದ ಫಲಿತಾಂಶ ನೀಡುತ್ತದೆ. ಮಲ್ಟಿಫ್ಲೆಕ್ಸ್ ಪಿಸಿಆರ್ ಪರೀಕ್ಷೆ ಹಲವಾರು ಸೋಂಕು ರೋಗದ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳ ಅಸ್ವಸ್ಥತೆಯನ್ನು ಕ್ಷಿಪ್ರವಾಗಿ ಗುರುತಿಸುವಲ್ಲಿ ಗಮನಾರ್ಹವಾಗಿ ಸುಧಾರಣೆ ತರಲು ನೆರವಾಗುತ್ತದೆ ಎಂದರು.
ಅತ್ಯಂತ ಉನ್ನತ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಅಸ್ವಸ್ಥತೆಯನ್ನು ಪತ್ತೆ ಮಾಡಲು ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಇದರಿಂದ ಚಿಕಿತ್ಸೆಯಲ್ಲಿ ವಿಳಂಬವಾಗುತ್ತದೆ. ಆರೋಗ್ಯ ಶುಶ್ರೂಷೆಯಂತಹ ಗಂಭೀರವಾದ ಕ್ಷೇತ್ರದಲ್ಲಿ ಸಮಯ ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿದ್ದು ಈ ಕೊರತೆಯನ್ನು ಮೆಟ್ರೊಪೊಲಿಸ್ ಹೆಲ್ತ್ಕೇರ್ ತುಂಬಲು ಯೋಜಿಸಿದೆ. ಇದರೊಂದಿಗೆ ರೋಗನಿದಾನದಲ್ಲಿನ ತೊಂದರೆಗಳನ್ನು ಅಪ್ರಸ್ತುತವಾಗಿಸಲು ಮುಂದಾಗಿದೆ.
ಮೆಟ್ರೊಪೊಲಿಸ್ ಹೆಲ್ತ್ಕೇರ್ ಲಿಮಿಟೆಡ್ನ ವಿಶೇಷಜ್ಞರು ಪ್ರತಿವರ್ಷ 15 ದಶಲಕ್ಷಕ್ಕೂ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುತ್ತಿದ್ದು 10,000ಕ್ಕೂ ಹೆಚ್ಚಿನ ಆಸ್ಪತ್ರೆಗಳು, ಪ್ರಯೋಗಾಲಯಗಳು, ನಸರ್ಿಂಗ್ ಹೋಮ್ಗಳು ಮತ್ತು ಎರಡು ಲಕ್ಷಕ್ಕೂ ಹೆಚ್ಚಿನ ಕನ್ಸಲ್ಟೆಂಟ್ಗಳಿಗೆ ಸೇವೆ ನೀಡುತ್ತಿದ್ದಾರೆ. 33 ವರ್ಷಗಳ ನಿಖರ ಪರೀಕ್ಷೆಗಳ ಅನುಭವ ಇರುವ ಮೆಟ್ರೊಪೊಲಿಸ್ ಭಾರತದ ಅತ್ಯಂತ ಗೌರವಾನ್ವಿತ ಮತ್ತು ಏಕೈಕ ಬಹುರಾಷ್ಟ್ರೀಯ ರೋಗ ನಿದಾನ ಕೇಂದ್ರಗಳ ಸರಣಿಯಾಗಿದ್ದು ಯುಎಇ, ಶ್ರೀಲಂಕಾ, ದಕದಕ್ಷಿಣ ಆಫ್ರಿಕಾ, ಕೀನ್ಯಾ, ಮಾರಿಷಸ್ ಮತ್ತು ಗಾನಾಗಳಲ್ಲಿ ಹಾಜರಿ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


