ಆರೋಗ್ಯ-ಜೀವನಶೈಲಿ

ದಂಡನಾ ಸುಖ: ವ್ಯಾಯಾಮ ಸೆಕ್ಸ್‌ಗೆ ಆಯಾಮ

ದಂಡನಾ ಸುಖ: ವ್ಯಾಯಾಮ ಸೆಕ್ಸ್‌ಗೆ ಆಯಾಮ
Published On :

ನಿತ್ಯ ವ್ಯಾಯಾಮದಿಂದ ದೇಹಾರೋಗ್ಯದೊಂದಿಗೆ 'ಸೆಕ್ಸ್‌' ಜೀವನವೂ ಸಮೃದ್ಧಿಯಾಗುತ್ತದೆ!

ನಮ್ಮ ದೇಹ ನಮ್ಮ ಮಾತು ಕೇಳಬೇಕಿದ್ದರೆ ನಾವು ಅದನ್ನು ದಂಡಿಸಬೇಕು. ವಿಶೇಷವಾಗಿ ನಗರ, ಪಟ್ಟಣಗಳಲ್ಲಿ ವಾಸಿಸುವರಿಗೆ ದೇಹ ದಂಡನೆ ಅನಿವಾರ್ಯ. ಬಿಡುವು ರಹಿತ ಜೀವನ ನಡೆಸುವ ಇವರಿಗೆ ದೇಹಾರೋಗ್ಯಕ್ಕೆ ನಿತ್ಯ ವ್ಯಾಯಾಮ ಅತ್ಯಗತ್ಯ. ವಿಶೇಷವಾಗಿ ಮಹಿಳೆಯರು ಈ ನಿಟ್ಟಿನಲ್ಲಿ ಹೆಚ್ಚು ಟೈಂ ಸ್ಪೆಂಡ್ ಮಾಡ್ಬೇಕು. ನಿತ್ಯ ವ್ಯಾಯಾಮದಿಂದ ದೇಹಾರೋಗ್ಯದೊಂದಿಗೆ 'ಸೆಕ್ಸ್‌' ಜೀವನವೂ ಸಮೃದ್ಧಿಯಾಗುತ್ತದೆ!

ಇದನ್ನು ಸಂಶೋಧನೆಗಳು ದೃಢಪಡಿಸಿವೆ. ಜಾಗಿಂಗ್, ಜಿಮ್ ವರ್ಕೌಟ್ ಲೈಂಗಿಕ ಜೀವನಕ್ಕೆ 'ಮೌಲ್ಯವರ್ಧಿತ' ಸೇವೆ ನೀಡಬಲ್ಲವು. ಶಾರೀರಕವಾಗಿ ತುಂಬಾ ಚಟುವಟಿಯಿಂದರುವ ಮಹಿಳೆಯರು ಕಾಮೋತ್ತೇಜಕದಲ್ಲಿ ಮುಂದಿರುತ್ತಾರೆ ಎನ್ನುತ್ತಾರೆ ಪ್ಲೋರಿಡಾ ಅಟ್ಲಾಂಟಿಕ್ ವಿವಿ ಆರೋಗ್ಯ ವಿಭಾಗದ ಪೊ.ಟೀನಾ ಎಂ. ಪೆನ್‌ಹ್ಯಾಲೋ. ವರ್ಕೌಟ್ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರ್ಮೋನ್‌ಗಳು ಮತ್ತು ಟೆಸ್ಟೋಸ್ಟ್ರೇನೋ ಸ್ಟೈರಾಯ್ಡ್‌ಗಳು ಉತ್ಪತ್ತಿಯಾಗುತ್ತವೆ. ಇವು ಲೈಂಗಿಕ ಕ್ರಿಯೆ ವೇಳೆ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎನ್ನುತ್ತದೆ ಸಂಶೋಧನೆ. ಆಸ್ಟಿನ್‌ನಲ್ಲಿರುವ ಯೂನಿರ್ವಸಿಟಿ ಆಫ್ ಟೆಕ್ಸಾಸ್ ನಡೆಸಿದ ಸಂಶೋಧನೆಯಲ್ಲಿ ಇದೇ ರೀತಿಯ ಫಲಿತಾಂಶ ಹೊರಬಿದ್ದಿದೆ.

ದಾಂಪತ್ಯದ ಸುಖಹೀನರಿಗೆ ವ್ಯಾಯಾಮವೂ ಮದ್ದಾಗಬಲ್ಲದು. ವ್ಯಾಯಾಮ ಮಾಡೋದು ರೂಢಿಸಿಕೊಂಡ್ರೆ ದೇಹದ ಆರೋಗ್ಯದೊಂದಿಗೆ, ಲೈಂಗಿಕ ಸಮಸ್ಯೆಗಳೂ ಪರಿಹಾರವಾಗಬಲ್ಲದು. ನಿತ್ಯದ ವ್ಯಾಯಾಮ ನಿಮ್ಮ ಸೆಕ್ಸುಯಲ್ ಲೈಫ್‌ಗೆ ಹೊಸ ಆಯಾಮ ನೀಡಬಲ್ಲದು. ಹಾಗಿದ್ದರೆ ಮತ್ಯಾಕೆ ತಡ ಇಂದಿನಿಂದಲೇ ವ್ಯಾಯಾಮ ಶುರು ಮಾಡಿ.

-ಮಲ್ಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.