ಉಳಿಯಲಿದೆ ಓಲ್ಡ್ ಮಾಂಕ್; ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹರ್ಷ

ಭಾರತೀಯ ಮದ್ಯ 'ಓಲ್ಡ್ ಮಾಂಕ್' ರಮ್ ನ ಮಾರಾಟ ಕುಸಿತ ಕಂಡಿದ್ದು, ಮಾರುಕಟ್ಟೆಯಿಂದ ಶೀಘ್ರದಲ್ಲೇ ಹೊರಬೀಳಲಿದೆ ಎಂಬ ವದಂತಿ, ಓಲ್ಡ್ ಮಾಂಕ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತೀಯ ಮದ್ಯ 'ಓಲ್ಡ್ ಮಾಂಕ್' ರಮ್ ನ ಮಾರಾಟ ಕುಸಿತ ಕಂಡಿದ್ದು, ಮಾರುಕಟ್ಟೆಯಿಂದ ಶೀಘ್ರದಲ್ಲೇ ಹೊರಬೀಳಲಿದೆ ಎಂಬ ವದಂತಿ, ಓಲ್ಡ್ ಮಾಂಕ್ ಅಭಿಮಾನಿಗಳನ್ನು ಕಂಗೆಡಿಸಿತ್ತು. ಓಲ್ಡ್ ಮಾಂಕ್ ರಮ್ ಬಗೆಗಿನ ಚರ್ಚೆಗಳು ಸಾಮಾಜಿಕ ಅಂತರ್ಜಾಲ ತಾಣಗಲಲ್ಲಿ ಕಳೆದ ಒಂದೆರಡು ವಾರಗಳಿಂದ ಟ್ರೆಂಡಿಂಗ್ ಆಗಿತ್ತು.

ಆದರೆ ಈ ವದಂತಿಗೆ ಬ್ರೇಕ್ ಹಾಕಿರುವ 'ಓಲ್ಡ್ ಮಾಂಕ್' ಉತ್ಪಾದನಾ ಸಂಸ್ಥೆ ಮೋಹನ್ ಮ್ಯಾಕೆನ್ ಲಿಮಿಟೆಡ್ ಸಂಸ್ಥೆ, ಓಲ್ಡ್ ಮಾಂಕ್ ಮಾರಾಟ ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾರಾಟ ಇಳಿಮುಖ ಕಂಡಿದ್ದರು ಅಸ್ತಿತ್ವಕ್ಕೆ ಧಕ್ಕೆ ಬರುವಂತಹ ಕುಸಿತವೇನೂ ಇಲ್ಲ ಎಂದು ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

ಇದರಿಂದ ನಿಟ್ಟುಸಿರು ಬಿಟ್ಟಿರುವ ಓಲ್ಡ್ ಮಾಂಕ್ ಅಭಿಮಾನಿಗಳು ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳು ಮದ್ಯದಂಗಡಿಗಳಿಗೂ ಕೊಂಡೊಯ್ದಿದ್ದಾರೆ ಎನ್ನಲಾಗುತ್ತಿದೆ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com