ಮಹಿಳೆಯರೊಂದಿಗೆ ಊಟ ಮಾಡಿದ್ರೆ ಪುರುಷರು ದಪ್ಪ ಆಗ್ತಾರಂತೆ!

ಮಹಿಳೆಯರೊಂದಿಗೆ ಊಟ ಮಾಡಿದರೆ ಪುರುಷರು ದಪ್ಪಗಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರು ತಮ್ಮ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಹಿಳೆಯರೊಂದಿಗೆ ಊಟ ಮಾಡಿದರೆ ಪುರುಷರು ದಪ್ಪಗಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರು ತಮ್ಮ ಗೆಳತಿಯರೊಂದಿಗೆ ಊಟ ಮಾಡುವಾಗ ಅವರನ್ನು ಮೆಚ್ಚಿಸಲೋಸುಗ ತುಸು ಜಾಸ್ತಿಯೇ ತಿನ್ನುತ್ತಾರೆ ಎಂದು ಅಮೆರಿಕದ ಕೋರ್ನಲ್ ವಿವಿಯ ಅಧ್ಯಯನ ತಂಡ ಹೇಳಿದೆ.
ಆದಾಗ್ಯೂ, ಪುರುಷರೊಂದಿಗೆಯೇ ಊಟ ಮಾಡುತ್ತಿದ್ದರೆ, ಪುರುಷರು ಈ ಸ್ವಭಾವವನ್ನು ತೋರಿಸುವುದಿಲ್ಲ ಎಂದು ಅಧ್ಯಯನ ತಂಡದ ನೇತೃತ್ವ ವಹಿಸಿದ ಕೇವಿನ್ ಕೆಫಿನ್ ಹೇಳಿದ್ದಾರೆ.   ಎರಡು ವಾರ ಇಟೆಲಿ ರೆಸ್ಟೋರೆಂಟ್ ಒಂದರಲ್ಲಿ  ಊಟ ಮಾಡಲು ಬಂದ ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಮಹಿಳೆಯರ ಜತೆ ಊಟ ಮಾಡುವಾಗು ಪುರುಷರು ಶೇ. 93ರಷ್ಟು ಹೆಚ್ಚು ಪ್ರಮಾಣದಲ್ಲಿ  ಆಹಾರ ಸೇವಿಸುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com