ಮತ್ತೊಬ್ಬರು ಆಕಳಿಸುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದೇಕೆ? ಇಲ್ಲಿದೆ ಉತ್ತರ

ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಸಹ ಆಕಳಿಕೆ ಬರುತ್ತದೆ. ಇದರ ಹಿಂದಿನ ಕಾರಣವನ್ನು ಸಂಶೋಧಕರು ಕಂಡುಹಿಡಿದಿದ್ದು, ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್...
ಆಕಳಿಕೆ
ಆಕಳಿಕೆ
Updated on: 
ನ್ಯೂಯಾರ್ಕ್: ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಸಹ ಆಕಳಿಕೆ ಬರುತ್ತದೆ. ಇದರ ಹಿಂದಿನ ಕಾರಣವನ್ನು ಸಂಶೋಧಕರು ಕಂಡುಹಿಡಿದಿದ್ದು, ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್ ರಿಫೆಕ್ಸಸ್ ನಿಂದ ಈ ರೀತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ. 
ಬೇರೊಬ್ಬರು ಆಕಳಿಸುತ್ತಿರುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದು ಎಕೋಫೆನೊಮೆನ ಸಾಮಾನ್ಯ ರೂಪವಾಗಿದ್ದು, ಸಹಜವಾಗಿಯೆ ಬರುವ ಅನುಕರಣೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆಕಳಿಕೆಯನ್ನು ತಡೆದಷ್ಟೂ ಹೆಚ್ಚಾಗುತ್ತದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕ ಜಾಕ್ಸನ್ ಹೇಳಿದ್ದಾರೆ. 
ಈ ಸಂಶೋಧನೆ ನರವ್ಯೂಹದ ಅಸ್ವಸ್ಥತೆಗಳು ಹೆಚ್ಚುವುದಕ್ಕೆ ಸಂಬಂಧಿಸಿದ ಅಧ್ಯಯನಕ್ಕೂ ಪೂರಕವಾಗಿರಲಿದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದು ಅಧ್ಯಯನ ವರದಿ ಕರೆಂಟ್ ಬಯಾಲಜಿ ಎಂಬ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com